ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಗನವಾಡಿ ಶಾಲೆಗಳು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ

ಅಂಗನವಾಡಿ ಶಾಲೆಗಳು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ

 


ಬೆಂಗಳೂರು : ರಾಜ್ಯದಲ್ಲಿ ಹಲವು ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿಯನ್ನು ಕೈಗೊಂಡ ಅಂಗನವಾಡಿ ಕಾರ್ಯಕರ್ತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ.

ಇನ್ನು ಮುಂದೆ ಎಲ್ಲ ಅಂಗನವಾಡಿ ಶಾಲೆಗಳು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ 2011ರಲ್ಲಿ ಎಲ್ಲ ಅಂಗನವಾಡಿ ಶಾಲೆಗಳನ್ನು ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆ ತೆರೆದಿಟ್ಟು ಶಿಕ್ಷಣ ನೀಡುವಂತೆ ಸರ್ಕಾರ ಆದೇಶಿತ್ತು.

ಆದರೆ, ಈಗ ಅಂಗನವಾಡಿ ಶಾಲೆಗಳಲ್ಲಿ ದೀರ್ಘಾವಧಿ ಕೆಲಸ ಮಾಡುತ್ತಿದ್ದರೂ ನಮಗೆ ಗೌರವಧನ ತೀವ್ರ ಕಡಿಮೆಯಾಗಿದೆ. ಹೀಗಾಗಿ, ಗೌರವಧನ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದಿದ್ದರು. ಈಗ ವೇತನ ಹೆಚ್ಚಳ ಮಾಡಲಾರದೇ ಸರ್ಕಾರ ಅಂಗನವಾಡಿ ಕೇಂದ್ರಗಳ ಸಮಯವನ್ನೇ ಬದಲಿಸಿದೆ. ಇಮ್ನುಮುಂದೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಶಾಲಾ ಪೂರ್ವ ಶಿಕ್ಷಣ ನೀಡುವಂತೆ ಸರ್ಕಾರ ಸೂಚಿಸಿದೆ.

ಅಂಗನವಾಡಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಇತರೆ ಯೋಜನೆಗಳ ಕಾರ್ಯಗಳನ್ನು ಮಾಡಲು ನೀಡುತ್ತಿದ್ದು, ಶಿಕ್ಷಣ ನೀಡಲು ಸಮಸ್ಯೆ ಉಂಟಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಶಿಕ್ಷಣ ನೀಡುವ ಸಮಯವನ್ನು ಮಾತ್ರ ಈಗ ಕಡಿತ ಮಾಡಲಾಗಿದೆ. ಇನ್ನು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಅವಧಿಯ ಶಿಕ್ಷಣದ ಸಮಯದಲ್ಲಿ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಂತಿಲ್ಲ. ಇನ್ನು ಅಂಗನವಾಡಿಯಲ್ಲಿ ಯಾವುದೇ ಕೆಲಸಗಳು ಇದ್ದರೂ ಅದನ್ನು ಮಧ್ಯಾಹ್ನ 2 ಗಂಟೆಯ ನಂತರ ಭೇಟಿ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

0 Comments

Post a Comment

Post a Comment (0)

Previous Post Next Post