ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ಜ.14ಕ್ಕೆ ವಿವಿಧ ರಸ್ತೆಗಳ ಗುದ್ದಲಿ ಪೂಜೆ ಕಾರ್ಯಕ್ರಮ

ಐವರ್ನಾಡು; ಜ.14ಕ್ಕೆ ವಿವಿಧ ರಸ್ತೆಗಳ ಗುದ್ದಲಿ ಪೂಜೆ ಕಾರ್ಯಕ್ರಮ

 


ಸುಳ್ಯ : ತಾಲೂಕಿನ ಮಾನ್ಯ ಶಾಸಕರು ಹಾಗೂ ಸಚಿವರ ವಿಶೇಷ ಅನುದಾನ ಹಾಗೂ ಮಳೆಹಾನಿಯಲ್ಲಿ ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆಗಳ ಗುದ್ದಲಿ ಪೂಜೆ ಕಾರ್ಯಕ್ರಮವು ದಿನಾಂಕ 14/01/2023 ನೇ ಶನಿವಾರ ಸಂಜೆ .4.30 ಗೆ ಕಲ್ಲೋಣಿ  ಜಂಕ್ಷನ್ ನಲ್ಲಿ ನಡೆಯಲಿದೆ, ಈ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರು ಗುದ್ದಲಿ ಪೂಜೆಯನ್ನು ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಜನಪ್ರತಿನಿಧಿಗಳು, ಗ್ರಾಮದ ಪ್ರಮುಖರೆಲ್ಲರೂ ಭಾಗವಹಿಸಲಿದ್ದಾರೆ.

ರಸ್ತೆಯ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹಾಗೂ ಭಾರತೀಯ ಜನತಾಪಕ್ಷದ ಬೂತ್ ಅಧ್ಯಕ್ಷರು,ಪದಾಧಿಕಾರಿಗಳು ಕಾರ್ಯಕರ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

1) ಕಲ್ಲೋಣಿ – ದೇವರಕಾನ ಸಂಪರ್ಕ ರಸ್ತೆ = ರೂ 1 ಕೋಟಿ
2) ಪರ್ಲಿಕಜೆ-ನಿಡುಬೆ ಸಂಪರ್ಕ ರಸ್ತೆ = ರೂ 25 ಲಕ್ಷ
3) ಐವರ್ನಾಡು – ದೇರಾಜೆ ಸಂಪರ್ಕ ರಸ್ತೆ = ರೂ 25 ಲಕ್ಷ (ಮಳೆ ಹಾನಿ)
4) ಕಲ್ಲೋಣಿ – ಕುಳ್ಳಂಪ್ಪಾಡಿ ರಸ್ತೆ = ರೂ 25 ಲಕ್ಷ. (ಮಳೆ ಹಾನಿ)
5) ಪಾಲೆಪ್ಪಾಡಿ – ಉದ್ದಂಪ್ಪಾಡಿ ರಸ್ತೆ = ರೂ 10 ಲಕ್ಷ

ಈ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ ಮಾನ್ಯ ಶಾಸಕರು ಹಾಗೂ ಸಚಿವರಾದ ಶ್ರೀ ಯಸ್.ಅಂಗಾರ

ಹಾಗೆ ಸಹಕರಿಸಿದ ಕರ್ನಾಟಕ ಸರ್ಕಾರದ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ  ಶ್ರೀ ಎ.ವಿ.ತೀರ್ಥರಾಮ ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ, ಕರ್ನಾಟಕ ಸರ್ಕಾರದ KFDC ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ಯಸ್.ಯನ್.ಮನ್ಮಥರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಜಯರಾಜ್ ಕುಕ್ಕೆಟ್ಟಿ, ಹಾಗೂ ಎಲ್ಲಾ ಮಂಡಲದ ಪ್ರಮುಖರು.

0 تعليقات

إرسال تعليق

Post a Comment (0)

أحدث أقدم