ಬ್ರಹ್ಮಾವರ: ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್ ಬ್ರಹ್ಮಾವರ (31) ಅವರು ನಿಧನ ಹೊಂದಿದರು.
ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ್ದು, ಖ್ಯಾತ ಕಲಾವಿದ ಮನು ಹಂದಾಡಿ ಅವರ ತಂಡದಲ್ಲಿ ಕೂಡ ಗುರುತಿಸಿಕೊಂಡಿದ್ದರು.
ಖಾಸಗಿ ವಾಹಿನಿಯ ಕುಂದಾಪುರ ಕನ್ನಡ ಹಾಸ್ಯ ಕಾರ್ಯಕ್ರಮದಲ್ಲಿ ತೊಡಗಿದ್ದರು. ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು.
Post a Comment