ವಿಟ್ಲ: ಕೃಷಿಕರೊಬ್ಬರು ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆಯೊಂದು ವಿಟ್ಲ ಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ನಿವಾಸಿ ಹರೀಶ್ (53) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಹರೀಶ್ ಅವರು ತೋಟದಲ್ಲಿ ಕೃಷಿ ಯಂತ್ರದ ಮೂಲಕ ಅಡಿಕೆ ತೆಗಿಯುವಾಗ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಲೀಲಾ, ಪುತ್ರರಾದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ವಿಶ್ವರಾಜ್ ಹಾಗೂ ವಿನೋದ್ ರಾಜ್‌ನನ್ನು ಅಗಲಿದ್ದಾರೆ.
Post a Comment