ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆರೋಗ್ಯಕರ ಜೀವನಕ್ಕೆ, ಆರೋಗ್ಯಕರ ಜೀವನ ಶೈಲಿ : ಒಂದು ಚಿಂತನೆ

ಆರೋಗ್ಯಕರ ಜೀವನಕ್ಕೆ, ಆರೋಗ್ಯಕರ ಜೀವನ ಶೈಲಿ : ಒಂದು ಚಿಂತನೆ

 


ಪ್ರತಿಯೊಬ್ಬ ಮನುಷ್ಯನ ಜೀವನಶೈಲಿಯೂ ಅವನು ಜೀವಿಸುವ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಭೂಮಿಯಲ್ಲಿ ಜೀವಿಸುವ ಎಲ್ಲಾ ಜೀವಿಗಳಿಗೂ ಅವರವರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಹಂಬಲವೂ ಇದ್ದೇ ಇರುತ್ತದೆ. ಹಾಗಾಗಿ ಹುಟ್ಟಿನಿಂದ ಸಾಯುವವರೆಗೂ ಅವುಗಳನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಭಿನ್ನ-ಭಿನ್ನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಇನ್ನೊಬ್ಬರನ್ನು ಮೆಚ್ಚಿಸುವ ಉದ್ದೇಶಕ್ಕೋ, ಕುಟುಂಬದ ಸಂತೋಷಕ್ಕಾಗಿಯೋ, ಅಥವಾ ಇನ್ನೇನೋ ಕಾರಣಗಳಿಗಾಗಿ ,ನಾನು ನನ್ನ ಜೀವನದಲ್ಲಿ ಸಾಧಿಸಬೇಕು ಎಂಬ ಹಿತ ದೃಷ್ಟಿಯಿಂದಲೋ, ಜನರು ಇಂದು  ತಮ್ಮನ್ನು ತಾವು ಮರೆಯುತ್ತಿದ್ದಾರೆ ಅನಿಸುತ್ತಿದೆ.

         ಒತ್ತಡದ ಕೆಲಸ, ಓಡಾಟ ,ಕೆಲವೊಂದು ಅವನಿಂದ ಆಗಬೇಕಾದ ಕರ್ತವ್ಯಗಳು ,ಇವುಗಳ ನಡುವೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳ ಬೇಕೆಂಬುದನ್ನೂ.. ತಿಳಿಯದಾಗಿದ್ದಾನೆ. ಈಗಿನ ನಮ್ಮ ಜೀವನ ಶೈಲಿಯೂ ಹಾಗೇನೇ... ಹೊತ್ತಲ್ಲದ ಹೊತ್ತಿನಲ್ಲಿ ಊಟ ,ನಿದ್ದೆ ,ಕೆಲಸ- ಕಾರ್ಯಗಳು ಆಗಿಬಿಟ್ಟಿವೆ. ನಾವು ಹಿಡಿದ ಕೆಲಸ ಸಂಪೂರ್ಣವಾಗಿ ಸರಿಯಾಗಿ.... ಪೂರ್ಣಗೊಳ್ಳಬೇಕಾದರೆ ಮಾನಸಿಕ ಮತ್ತು ದೈಹಿಕ ನೆಮ್ಮದಿ ,ಜೊತೆಗೆ ಅರ್ಥಪೂರ್ಣವಾದ ಕ್ರಿಯಾತ್ಮಕವಾದ ಒಂದು ಪೂರ್ವ ತಯಾರಿ...ಯೋಚನೆ-ಯೋಜನೆ ಅಗತ್ಯ. ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯನು ಮೊದಲು ಚಿಂತಿಸಬೇಕಾಗಿರುವುದು ಆರೋಗ್ಯಕರ ಜೀವನ ಶೈಲಿಯನ್ನು ಹೇಗೆ ಹೊಂದ ಬಹುದು..?  ಎಂಬುದನ್ನು. ನಮ್ಮ ಮನಸ್ಸು ಮತ್ತು ದೇಹ ಆರೋಗ್ಯ ಇವುಗಳು ಸರಿಯಾಗಿ ಕೆಲಸ ನಿರ್ವಹಿಸಿದ್ದರೆ ನಮ್ಮ ಎಲ್ಲಾ ಯೋಜನೆಗಳು ಸರಿಯಾದ ದಾರಿಯಲ್ಲಿ ಸಾಗಿ ಯಶಸ್ಸು ಹೊಂದಲು ಸಾಧ್ಯ. ಅದರ ಜೊತೆಗೆ ಪ್ರಯತ್ನ ,ದೃಢ ನಿರ್ಧಾರ ,ಒಳ್ಳೆಯ ಯೋಚನೆ ಮತ್ತು ಯೋಜನೆಗಳು ಹಾಗೂ ನಿರ್ದಿಷ್ಟ ಗುರಿಯೂ ಅಗತ್ಯ.

       ಈ ಕುರಿತು ನಮ್ಮ ಗುರು-ಹಿರಿಯರ ಮಾರ್ಗದರ್ಶನ ಹಾಗೂ ಉತ್ತಮ ಶಿಕ್ಷಣ-ಜ್ಞಾನಗಳ ಸದುಪಯೋಗ ನಾವು ನಮ್ಮ ಮಕ್ಕಳು ಪಡೆಯಬೇಕಾದ ಅಗತ್ಯವಿದೆ.ಈ ಕುರಿತು ನಾವೆಲ್ಲ ಚಿಂತಿಸಿ ಹೆಜ್ಜೆಯಿಡೋಣ.ಆರೋಗ್ಯಪೂರ್ಣ ನೆಮ್ಮದಿಯ ಜೀವನ ಸಾಗಿಸೋಣ.


      ✍️ಶ್ರೀಮತಿ ಅಕ್ಷತಾ ವಿಮರ್ಶ್ ಜೈನ್,ಶ್ರೀ ವಿದ್ಯಾಕೇಂದ್ರ, ದ ಸ್ಮಾರ್ಟ್ ಸ್ಕೂಲ್ ಬೆಂಗಳೂರು.

0 Comments

Post a Comment

Post a Comment (0)

Previous Post Next Post