ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೋನಾ ಹೆಚ್ಚಾಗಲಿದೆ.

ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೋನಾ ಹೆಚ್ಚಾಗಲಿದೆ. ಬೆಂಗಳೂರು: ಹಲವು ದೇಶಗಳಲ್ಲಿ ಕೊರೋನಾ BF.7 ತಳಿ ಆರ್ಭಟ ಜೋರಾಗಿದೆ. ಭಾರತದಲ್ಲೂ ಕೂಡ ಈ ತಳಿ ಭಾರೀ ವೇಗವಾಗಿ ಹರಡಲಿದೆ. ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳಿನಲ್ಲಿ ಕೊರೋನಾ ಹೆಚ್ಚಾಗಲಿದೆ ಅಂತ ಹಿರಿಯ ವೈದ್ಯ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.


ಅತೀ ವೇಗವಾಗಿ ಹರಡುವುದರಿಂದ ಪಾಟಿಸಿಟಿವಿಟಿ ರೇಟ್‌ ಕೂಡ ಹೆಚ್ಚಾಗಲಿದೆ. ಪ್ರತಿಯೊಬ್ಬರು ಬೂಸ್ಟರ್‌ ಡೋಸ್‌ ಲಸಿಕೆ ಹಾಕಿಸಿಕೊಳ್ಳಬೇಕು. ಜ್ವರ, ಶೀತ, ಕೆಮ್ಮು ಬಂದರೆ ವೈದ್ಯರ ಸಲಹೆ ಪಡೆಯಬೇಕು, ಹೊಸ ವರ್ಷಾಚರಣೆ ವೇಳೆ ಮೈಮರೆಯಬಾರದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ. 

0 Comments

Post a Comment

Post a Comment (0)

Previous Post Next Post