ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 6ನೇ ತರಗತಿ ಬಾಲಕ ಕುಸಿದು ಬಿದ್ದು ಸಾವು

6ನೇ ತರಗತಿ ಬಾಲಕ ಕುಸಿದು ಬಿದ್ದು ಸಾವು

 


ಹುಬ್ಬಳ್ಳಿ; ಆರನೇ ತರಗತಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಶಾಲೆಯಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾನೆ.

ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.


ಕಲಘಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಕ್ತುಮ್ ಮಹ್ಮದ್ ರಫಿ ಮನಿಯಾರ್ (13) ಮೃತ ಬಾಲಕ. ಕುಸಿದು ಬಿದ್ದ ತಕ್ಷಣವೇ ಬಾಲಕನನ್ನು ಶಿಕ್ಷಕರು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.

ಆದರೆ ಆತ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.

0 Comments

Post a Comment

Post a Comment (0)

Previous Post Next Post