ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶಾಖಪಟ್ಟಣ: ಮೀನುಗಾರರ ಬಲೆಗೆ ಬಿದ್ದ 5 ಅಡಿ ಉದ್ದದ ಹಾವು

ವಿಶಾಖಪಟ್ಟಣ: ಮೀನುಗಾರರ ಬಲೆಗೆ ಬಿದ್ದ 5 ಅಡಿ ಉದ್ದದ ಹಾವು



ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್​ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.


ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು ಅದನ್ನು ಹತ್ತಿರದಿಂದ ನೋಡಿದ ಬಳಿಕ ನಿಬ್ಬೆರಗಾಗಿದ್ದಾರೆ.


ಬಳಿಕ ಆ ಹಾವನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು. ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದು, ಅದೊಂದು ಅಪಾಯಕಾರಿ ಹಾವು ಎಂದಿದ್ದಾರೆ. ಅದರ ವೈಜ್ಞಾನಿಕ ಹೆಸರು 'ಹೈಡ್ರೋಫಿಸ್ ಗ್ರಾಸಿಲಿಸ್' ಎಂದು ತಿಳಿಸಿದರು.


ಈ ಹಾವು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯವಾಗಿ ಸಮುದ್ರ ಹಾವೆಂದು ಮೀನುಗಾರರು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುಳಿಯುತ್ತವೆ. ಆಹಾರವನ್ನು ಹುಡುಕಾಡುವ ಸಂದರ್ಭದಲ್ಲಿ ಈ ಹಾವು ಮೀನುಗಾರರ ಬಲೆಗೆ ಸಿಲುಕಿದೆ ಎನ್ನಲಾಗಿದೆ.


0 Comments

Post a Comment

Post a Comment (0)

Previous Post Next Post