ನವದೆಹಲಿ : ದೆಹಲಿ-ಕಾನ್ಪುರ್ ನೀಲಾಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ತಗುಲಿ ಪ್ರಯಾಣಿಕ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದಲ್ಲಿ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೋಚ್ ಗಾಜಿನ ಕಿಟಕಿಯನ್ನು ಒಡೆದ ಕಬ್ಬಿಣದ ರಾಡ್ ವ್ಯಕ್ತಿಯ ಕುತ್ತಿಗೆಗೆ ತಗುಲಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಹೃಷೇಕೇಶ್ ದುಬೆ ಎಂದು ಗುರುತಿಸಲಾಗಿದೆ. ಕಬ್ಬಿಣದ ರಾಡ್ ಕುತ್ತಿಗೆಗೆ ಚುಚ್ಚಿದಾಗ ಕಿಟಕಿಯ ಬಳಿ ಕುಳಿತಿದ್ದರು ಎನ್ನಲಾಗುತ್ತಿದೆ.
ಘಟನೆ ಸಂಭವಿಸಿದಾಗ ಹಳಿಗಳ ಮೇಲೆ ಕೆಲವು ಕೆಲಸಗಳು ನಡೆಯುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಆದರೆ, ಇದುವರೆಗೆ ರೈಲ್ವೆ ಇಲಾಖೆಯಿಂದ ಯಾವುದೇ ದೃಢೀಕರಣ ಬಂದಿಲ್ಲ.
ಮೃತದೇಹವನ್ನು ಜಿಆರ್‌ಪಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ
Post a Comment