ಹುಬ್ಬಳ್ಳಿ; ಆರನೇ ತರಗತಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಶಾಲೆಯಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾನೆ.
ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಕಲಘಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಕ್ತುಮ್ ಮಹ್ಮದ್ ರಫಿ ಮನಿಯಾರ್ (13) ಮೃತ ಬಾಲಕ. ಕುಸಿದು ಬಿದ್ದ ತಕ್ಷಣವೇ ಬಾಲಕನನ್ನು ಶಿಕ್ಷಕರು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.
ಆದರೆ ಆತ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.
إرسال تعليق