ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.
ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು ಅದನ್ನು ಹತ್ತಿರದಿಂದ ನೋಡಿದ ಬಳಿಕ ನಿಬ್ಬೆರಗಾಗಿದ್ದಾರೆ.
ಬಳಿಕ ಆ ಹಾವನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು. ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದು, ಅದೊಂದು ಅಪಾಯಕಾರಿ ಹಾವು ಎಂದಿದ್ದಾರೆ. ಅದರ ವೈಜ್ಞಾನಿಕ ಹೆಸರು 'ಹೈಡ್ರೋಫಿಸ್ ಗ್ರಾಸಿಲಿಸ್' ಎಂದು ತಿಳಿಸಿದರು.
ಈ ಹಾವು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯವಾಗಿ ಸಮುದ್ರ ಹಾವೆಂದು ಮೀನುಗಾರರು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುಳಿಯುತ್ತವೆ. ಆಹಾರವನ್ನು ಹುಡುಕಾಡುವ ಸಂದರ್ಭದಲ್ಲಿ ಈ ಹಾವು ಮೀನುಗಾರರ ಬಲೆಗೆ ಸಿಲುಕಿದೆ ಎನ್ನಲಾಗಿದೆ.
إرسال تعليق