ಮಯೂರ್ ವಕಾನಿ ಅವರು ಉತ್ತಮ ಶಿಲ್ಪ ಕಲಾವಿದರೂ ಆಗಿದ್ದು, ಅವರು ಇನ್‌ಸ್ಟಾಗ್ರಾಂನಲ್ಲಿ ರಚಿಸುವ ಕಲಾಕೃತಿ ಜನಮೆಚ್ಚುಗೆ ಪಡೆದಿದೆ.
ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಲಾಕೃತಿಯೊಂದನ್ನು ರಚಿಸಿದ್ದು, ಜನರಿಂದ ಭಾರಿ ಮೆಚ್ಚುಗೆ ಪಡೆದಿದೆ.
ನರೇಂದ್ರ ಮೋದಿ ಅವರ ಶಿಲ್ಪ ಕಲಾಕೃತಿಯ ಫೋಟೊಗಳನ್ನು ಮಯೂರ್ ವಕಾನಿ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಸೆಲ್ಫಿ ವಿತ್ ಮೋದಿ ಎಂಬ ವಾಕ್ಯದೊಂದಿಗೆ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಫೋಟೊಗಳು ವೈರಲ್ ಆಗಿವೆ.
ನರೇಂದ್ರ ಮೋದಿ ಅವರು ಕುಳಿತಿರುವ ಭಂಗಿಯಲ್ಲಿ ರಚಿಸಿದ ಕಲಾಕೃತಿ ಇದಾಗಿದ್ದು, ನಿಜವಾಗಿಯೂ ಮೋದಿ ಅವರೇ ಕುಳಿತಿದಿದ್ದಾರೇನೋ ಎಂಬಂತೆ ಅನಿಸುತ್ತದೆ.
إرسال تعليق