ಶಿರಡಿ; ಕಿಚ್ಚ ಸುದೀಪ್ ದಂಪತಿ ನಿನ್ನೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬ ದರ್ಶನ ಮಾಡಿದ್ದಾರೆ. ವಿಕ್ರಾಂತ್ ರೋನ ಚಿತ್ರದ ಯಶಸ್ಸಿನ ನಂತರ ಸುದೀಪ್ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು.
ಈ ನಡುವೆ ಬಿಡುವು ಮಾಡಿಕೊಂಡು ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಶಿರಡಿ ಸಾಯಿಯ ದರ್ಶನ ಪಡೆದಿದ್ದಾರೆ.
ಬಿಗ್‌ಬಾಸ್ ಶೋ ಮುಗಿದ ನಂತರ ನಿರ್ದೇಶಕ ನಂದಕಿಶೋರ್ ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಒಳ್ಳೆಯ ಕತೆ ಸಿದ್ಧವಾಗಿದೆ ಎನ್ನಲಾಗಿದ್ದು, ನಟಿ ರಮ್ಯಾ ಜೊತೆ ಕೂಡಾ ಒಂದು ಸಿನಿಮಾದಲ್ಲಿ ನಟಿಸಲಿದ್ದಾರಂತೆ.
ಹೀಗಾಗಿ, ಬಿಗ್ ಬಾಸ್ ಮುಗಿದ ನಂತರ ಬ್ಯುಸಿಯಾಗುವುದರಿಂದ ಮೊದಲೇ ಶಿರಡಿಗೆ ಹೋಗಿ ಸಾಯಿಬಾಬ ದರ್ಶನ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
إرسال تعليق