ಮೊಬೈಲ್ ನಲ್ಲಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಆನ್‌ಲೈನ್ ಮೂಲಕ ಸಂದೇಶ ರವಾನಿಸಿ ದುಷ್ಕರ್ಮಿಗಳು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದೀಗ ಮೊಬೈಲಿನಲ್ಲಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಆನ್‌ಲೈನ್ ಮೂಲಕ ಸಂದೇಶ ರವಾನಿಸಿ ದುಷ್ಕರ್ಮಿಗಳು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಸ್ಕಾಂ ಅಧಿಕಾರಿಗಳ ಹೆಸರಲ್ಲಿ ಮೋಸ ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಬೆಸ್ಕಾಂ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ವಂಚಕರು ವಿದ್ಯುತ್ ನಿಗಮದ ಹೆಸರಿನಲ್ಲಿ ಸಂದೇಶವನ್ನು ಕಳುಹಿಸುವ ಮೂಲಕ ಅವರಿಗೆ ಕರೆ ಮಾಡುವಂತೆ ಸೂಚಿಸುತ್ತಿದ್ದಾರೆ, ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವಂತೆ ಎಚ್ಚರಿಸಿದ್ದಾರೆ.
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹರಿದಾಡುತ್ತಿದೆ. "ಪ್ರಿಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗದ ಕಾರಣ ಇಂದು ರಾತ್ರಿ 9.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ದಯವಿಟ್ಟು ತಕ್ಷಣವೇ ನಮ್ಮ ವಿದ್ಯುತ್ ಅಧಿಕಾರಿಯನ್ನು ಸಂಪರ್ಕಿಸಿ ಧನ್ಯವಾದಗಳು", ಎಂದು ಒಂದು ಮೊಬೈಲ್ ಸಂಖ್ಯೆಯೊಂದಿಗೆ ಸಂದೇಶದಲ್ಲಿ ಬರೆಯಲಾಗಿರುತ್ತದೆ.
ಈ ಸಂದೇಶವು ಅಧಿಕೃತ ಮೂಲದಿಂದ ಬರದಿದ್ದರೂ, ಬಹಳಷ್ಟು ಜನರು ಈ ಸಂಖ್ಯೆಗೆ ಕರೆ ಮಾಡಿ ಅವರು ತಿಳಿಸುವ ಆಯಪ್ ಇನ್ಸ್ಟಾಲ್ ಮಾಡಿ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ.
إرسال تعليق