ಉಡುಪಿ : ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ 50 ದಿನಗಳನ್ನು ಪೂರೈಸಿದೆ. ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ 50 ದಿನಗಳನ್ನು ಪೂರೈಸಿದೆ.
ಈ ಸಂದರ್ಭದಲ್ಲಿ ಉಡುಪಿಯ ಕಾಪು ಬೀಚ್ ನಲ್ಲಿ ಕಾಂತಾರ 50ರ ಸಂಭ್ರಮದ ಮರಳುಶಿಲ್ಪವನ್ನು ಸ್ಯಾಂಡ್ ಆರ್ಟ್ ಕಲಾವಿದರು ನಿರ್ಮಿಸಿದ್ದಾರೆ.
ಅದರಲ್ಲೂ ಪಂಜುರ್ಲಿ ಕಲಾಕೃತಿಯನ್ನೇ ಮರಳು ಶಿಲ್ಪ ಮಾಡಲು ಕಲಾವಿದರು ಆಯ್ಕೆ ಮಾಡಿಕೊಂಡಿದ್ದಾರೆ.
ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಕಲಾಕೃತಿಯನ್ನು ಸ್ಯಾಂಡ್ ಆರ್ಟ್ ಹೆಸರಿನಲ್ಲಿ ತಂಡ ಕಟ್ಟಿರುವ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು ಮತ್ತು ವೆಂಕಿ ಪಲಿಮಾರು ಮೂವರು ಒಂದು ದಿನ ಟೈಮ್ ತಗೆದುಕೊಂಡು ರಚಿಸಿದ್ದು, ಇದೀಗ ಕಾಪು ಬೀಚ್ ಗೆ ಸಾವಿರಾರು ಜನರು ಈ ಕಲಾಕೃತಿಯನ್ನು ನೋಡುವುದಕ್ಕೆ ಬರುತ್ತಿದ್ದಾರಂತೆ.
إرسال تعليق