ಮಂಗಳೂರು: ಭಾರತೀಯ ವಾಯುಪಡೆಯು ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗೆ ಅಗ್ನಿಪಥ್ ಯೋಜನೆಯಡಿ ವಾಯು ಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು 2023ನೇ ಜನವರಿಯಲ್ಲಿ ನಡೆಯುವ ಆನ್‍ಲೈನ್ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ.
ಪಿಯುಸಿ ಯಲ್ಲಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50% ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50% ಅಂಕಗಳೊಂದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ ಯುವತಿಯರು 2002ನೇ ಜೂನ್ 27ರಿಂದ 25ರ ಡಿಸೆಂಬರ್ 27ರ ನಡುವೆ ಜನಿಸಿರುವವರು ವೆಬ್‍ಸೈಟ್https://agnipathvayu.cdac.in ಮೂಲಕ 2022ರ ನವೆಂಬರ್ 23ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://careerindianairforce.cdac.in ಪರಿಶೀಲಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.
إرسال تعليق