ಬೆಂಗಳೂರು: ಗಟ್ಟಿಮೇಳ ಧಾರವಾಹಿಯ ಅದಿತಿ ಮತ್ತು ಪಾರು ಧಾರವಾಹಿಯ ಪ್ರೀತಂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಅದಿತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾ ಜೆ ಆಚಾರ್ ಮತ್ತು ಪ್ರೀತಂ ಪಾತ್ರದಲ್ಲಿ ನಟಿಸುತ್ತಿರುವ ಸಿದ್ದು ಮೂಲಿಮನಿ ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಮೊನ್ನೆಯಷ್ಟೇ ಸಿದ್ದು ತಮ್ಮ ಪ್ರೀತಿ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದರು.
ಬಹಳ ಸಮಯದಿಂದ ಇಬ್ಬರೂ ಜೊತೆಯಾಗಿ ರೀಲ್ಸ್, ಫೋಟೋ ಶೂಟ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಅನುಮಾನಿಸಿದ್ದರು.
ಅದೀಗ ನಿಜವಾಗಿದೆ. ಇತ್ತೀಚೆಗಷ್ಟೇ ಕಮಲಿ ಧಾರವಾಹಿಯ ಗ್ಯಾಬ್ರಿಯಾಲಾ ಮತ್ತು ಸುಹಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಅವರ ಬಳಿಕ ಸತ್ಯ ಧಾರವಾಹಿಯ ನಾಯಕ ಸಾಗರ್ ಮೊನ್ನೆಯಷ್ಟೇ ಸಿರಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಜೀ ಕನ್ನಡದ ಮತ್ತೊಂದು ಜೋಡಿ ರಿಯಲ್ ಲೈಫ್ ನಲ್ಲಿ ಜೋಡಿಯಾಗುತ್ತಿದೆ.
إرسال تعليق