ನವದೆಹಲಿ : ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ಮಾಜಿ ರಾಜಕಾರಣಿ, ತೆಲುಗು ಚಲನಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸಿದ ನಟ ಚಿರಂಜೀವಿ ಅವರು ಭಾನುವಾರ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 2022ರ 'ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್' ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತೀಯ ಚಲನಚಿತ್ರ ನಟ ಚಿರಂಜೀವಿ ಜೀ ಅವರು ಸುಮಾರು ನಾಲ್ಕು ದಶಕಗಳ ಕಾಲ ನಟರಾಗಿ, ನೃತ್ಯಗಾರ್ತರಾಗಿ ಮತ್ತು ನಿರ್ಮಾಪಕರಾಗಿ 150ಕ್ಕೂ ಹೆಚ್ಚು ಚಲನಚಿತ್ರಗಳನ್ನ ಮಾಡಿದ್ದಾರೆ.
ಅವರು ತೆಲುಗು ಸಿನೆಮಾದಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ. ಅಮೋಘ ಪಾತ್ರಗಳು ಹೃದಯಗಳನ್ನು ಸ್ಪರ್ಶಿಸುತ್ತವೆ. ಅಭಿನಂದನೆಗಳು' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಟ್ವೀಟ್ ಮಾಡಿದ್ದಾರೆ.
إرسال تعليق