ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ಯಾರಾ ಮಿಲಿಟರಿ ಕಚೇರಿ ಆವರಣಕ್ಕೆ ಹಾರಿದ ಡ್ರೋನ್; ಮಿಲಿಟರಿ ಅಧಿಕಾರಿಗಳಿಂದ FIR ದಾಖಲು

ಪ್ಯಾರಾ ಮಿಲಿಟರಿ ಕಚೇರಿ ಆವರಣಕ್ಕೆ ಹಾರಿದ ಡ್ರೋನ್; ಮಿಲಿಟರಿ ಅಧಿಕಾರಿಗಳಿಂದ FIR ದಾಖಲು

 


ಬೆಂಗಳೂರಿನಲ್ಲಿ ಪ್ಯಾರಾ ಮಿಲಿಟರಿ ಕಚೇರಿಗಳ ಆವರಣಕ್ಕೆ ಅಪರಿಚಿತರಿಂದ ಡ್ರೋನ್ ಹಾರಿಸಿದ ಘಟನೆ ನಡೆದಿದ್ದು, (Drone flying ) ಈ ಕುರಿತು ಮಿಲಿಟರಿ ಅಧಿಕಾರಿಗಳಿಂದ ಎಫ್ ಐ ಆರ್ ದಾಖಲಾಗಿದೆ.


ಬೆಂಗಳೂರು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಜೆಸಿ ನಗರದ ಚಿನ್ನಪ್ಪ ಗಾರ್ಡನ್ ನಲ್ಲಿರುವ INF BN(TA) PARA ಮಿಲಿಟರಿ ರೆಜಿಮೆಂಟ್‌ನಲ್ಲಿ ಈ ಘಟನೆ ನಡೆದಿದೆ.


ನವೆಂಬರ್ 9ರಂದು ಸಂಜೆ 6.30 ರಿಂದ 7 ಗಂಟೆ ಅವಧಿಯಲ್ಲಿ ಡ್ರೋನ್ ಹಾರಿಸಲಾಗಿದೆ. ಈ ವೇಳೆ ಗಸ್ತಿನಲ್ಲಿದ್ದ ಮಿಲಿಟರಿ ಸಿಬ್ಬಂಧಿ ಇದನ್ನ ಗಮನಿಸಿದ್ದಾರೆ.


ಮಂಗಳೂರು ಬಾಂಬ್ ಸ್ಪೋಟದ ಹಿನ್ನೆಲೆ ಈ ಪ್ರಕರಣ ಆತಂಕ ಉಂಟು ಮಾಡಿದೆ. ಸದ್ಯ ಪ್ರಕರಣ ದಾಖಲಿಸಿ ಡ್ರೋನ್ ಹಾರಿಸಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم