ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಮಂಗಳಗೌರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಮಾನಸ ಜೋಶಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ರಾಜೇಶ್ವರಿ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟಿ, ಸಂತಸ ಸುದ್ದಿಯನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಲಾಸ್ಟ್ ಬಸ್, ಅಮೃತ ಅಪಾರ್ಟ್‍ಮೆಂಟ್ಸ್, ಯಶೋಗಾಥೆ, ಹರಿವು, ಹಜ್, ಕಿರಗೂರಿನ ಗಯ್ಯಾಳಿಗಳು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ ಮಾನಸ ಜೋಶಿ.
ಇತ್ತೀಚೆಗೆ ಕ್ಯಾನ್ಸರ್ ರೋಗಿಗಳಿಗೆ ಮಾನಸ ಜೋಶಿ ಅವರು ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಮಾನಸ ಜೋಶಿ ಅವರು ಕಥಕ್ ನೃತ್ಯಗಾರ್ತಿಯೂ ಹೌದು.
ಸಾಲದೆಂಬಂತೆ ʻಯಶೋಗಾಥೆ', ʻದೇವರ ನಾಡಲ್ಲಿ' ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
Post a Comment