ವಯನಾಡ್ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.
ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿ ಜೀತೇಶ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ನಾಲ್ಕು ವರ್ಷದ ಆದಿ ದೇವ್ನನ್ನು ಕೊಲೆ ಮಾಡಿರುವ ಆರೋಪಿ
ಬಾಲಕನ ತಾಯಿ ಅಂಗನವಾಡಿಗೆ ಕರೆದೊಯ್ಯುತ್ತಿದ್ದಾಗ ಇಬ್ಬರ ಮೇಲೆ ಜೀತೇಶ್ ಹಲ್ಲೆ ನಡೆಸಿದ್ದಾನೆ.
ಘಟನೆಯಲ್ಲಿ ಬಾಲಕನ ಎಡ ಕಿವಿ ಮತ್ತು ತಲೆಯ ಬಳಿ ತೀವ್ರವಾಗಿ ಗಾಯವಾಗಿತ್ತು. ತಾಯಿಗೂ ತೀವ್ರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟರೆ ತಾಯಿಗೆ ಚಿಕಿತ್ಸೆ ಮುಂದುವರೆದಿದೆ.
ಆರೋಪಿ ಜೀತೇಶ್ ಹಾಗೂ ಬಾಲಕನ ತಂದೆ ಜಯಪ್ರಕಾಶ್ ವ್ಯಾಪಾರ ಪಾಲುದಾರರಾಗಿದ್ದರು.
ಇವರಿಬ್ಬರೂ ಕೊಚ್ಚಿಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
إرسال تعليق