ಪುತ್ತೂರು: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಪುತ್ತೂರಿನ ಪರ್ಪುಂಜದಲ್ಲಿರುವ ಸೌಗಂಧಿಕದಲ್ಲಿ ಮಕ್ಕಳ ಹಾಡುಗಳು ಮತ್ತು ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಅ.22ರಂದು ಶನಿವಾರ ಏರ್ಪಡಿಸಲಾಗಿದೆ.
ಖ್ಯಾತ ಗಾಯಕ ಅರವಿಂದ ಕುಡ್ಲ ಮತ್ತು ಚಂದ್ರಹಾಸ ಉಳ್ಳಾಲ್ ಬಳಗದಿಂದ ಸಂಜೆ 6ರಿಂದ ಈ ಕಾರ್ಯಕ್ರಮ ನಡೆಯಲಿದೆ.
ಹಾಡಿನೊಂದಿಗೆ ಹಣತೆ ಹಚ್ಚೋಣ ಬನ್ನಿ ಎಂದು ಸೌಗಂಧಿಕ ಬಳಗ ಆಹ್ವಾನಿಸಿದೆ. ಹೆಚ್ಚಿನ ವಿವರಗಳಿಗೆ: 9900409380, 9448012066 ಸಂಪರ್ಕಿಸಬಹುದು.
إرسال تعليق