ಮಂಗಳೂರು : ಕರಾವಳಿಗೆ ಬಂದು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಬಾಲಕಿ ಕೊನೆಗೂ ಪತ್ತೆಯಾಗಿದ್ದಾಳೆ.
ಗೋವಾದ ಪಣಜಿಯಲ್ಲಿ ಭಾರ್ಗವಿ ಪತ್ತೆಯಾಗಿದ್ದಾಳೆ. ಈ ಮಾಹಿತಿಯನ್ನು ಭಾರ್ಗವಿ ಕುಟುಂಬದ ಸದಸ್ಯರು ಧೃಡಪಡಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಭಾರ್ಗವಿ (14) ಸೋಮವಾರ ಬೆಂಗಳೂರಿನಿಂದ ನಾಪತ್ತೆಯಾಗಿ ಬಸ್ ಮೂಲಕ ಮುಂಜಾನೆ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್, ಕದ್ರಿ ಪಾರ್ಕ್ ತಿರುಗಿದ್ದಳು.
ಅಲ್ಲಿಂದ ರಿಕ್ಷಾದಲ್ಲಿ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಇತ್ತು.
ಬಳಿಕ ಏಲ್ಲಿ ಹೋಗಿರಬಹುದೆಂಬ ಮಾಹಿತಿ ಸ್ಪಷ್ಟವಾಗಿರಲಿಲ್ಲ, ಆದರೆ ಕರ್ನಾಟಕ ಪೊಲೀಸ್, ನೆರೆ ರಾಜ್ಯದ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಕೊನೆಗೂ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿ ಸುಖಾಂತ್ಯ ಕಂಡಿದೆ.
ಇದಕ್ಕೆ ಶ್ರಮಿಸಿದ ಮಂಗಳೂರು, ಬೆಂಗಳೂರು ಪೋಲಿಸ್, ಸಾಮಾಜಿಕ ಜಾಲತಾಣ , ಸಹಕರಿಸಿದ ಎಲ್ಲರಿಗೂ ಕುಟುಂಬದ ಸದಸ್ಯರು ಧನ್ಯವಾದ ಹೇಳಿದ್ದಾರೆ.
إرسال تعليق