ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಮಂಡಲ ಗುಂಪೆ ವಲಯ ಸಭೆ

ಹವ್ಯಕ ಮಂಡಲ ಗುಂಪೆ ವಲಯ ಸಭೆ


ಧರ್ಮತ್ತಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಅಕ್ಟೋಬರ್ ತಿಂಗಳ ಸಭೆಯು ಅ.9ರಂದು ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು.

ಧ್ವಜಾರೋಹಣ, ಶಂಖನಾದ ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು  ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.

ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ, ಮಹಾಮಂಡಲ ಸುತ್ತೋಲೆ ಮತ್ತು ಮುಳ್ಳೇರಿಯ ಮಂಡಲ ಸಭೆಯ ವರದಿಯನ್ನು ವಾಚಿಸಿದರು. 

ವಲಯ ಕೋಶಾಧಿಕಾರಿ ರಾಜಗೋಪಾಲ ಅಮ್ಮಂಕಲ್ಲು ಸೆಪ್ಟೆಂಬರ್ ತಿಂಗಳ ಲೆಕ್ಕಪತ್ರವನ್ನು ಮಂಡಿಸಿದರು. ವೈದಿಕ ಪ್ರಧಾನರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಉಪಾಸನಾ ವಿವರಗಳನ್ನು ನೀಡಿದರು. ಮಾತೃಪ್ರಧಾನೆ ಲಲಿತಾ ಮಾಣಿ, ಬಿಂದು- ಸಿಂಧು ಪ್ರಧಾನ ನರೇಶ್ ಬಾಯಾಡಿ ತಮ್ಮ ವಿಭಾಗದ ವರದಿಗಳನ್ನು ನೀಡಿದರು. 

ವೀಕ್ಷರಕಾಗಿ ಆಗಮಿಸಿದ ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಗೋಕರ್ಣದ ಅಶೋಕೆಯಲ್ಲಿ ಕಾರ್ಯಾಚರಿಸುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿಗಳನ್ನು ನೀಡಿ ಮುಂದಿನ ಯೋಜನೆಗಳಿಗೆ ಎಲ್ಲರ ಸಹಕಾರವನ್ನು ಅಪೇಕ್ಷಿಸಿದರು. ಗುಂಪೆ ವಲಯದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು ಇತ್ತೀಚೆಗೆ ಬಿಡುಗಡೆಯಾದ "ಸ್ವಯಂವರ" ಹವ್ಯಕ ಕಾದಂಬರಿಯ ಲೇಖಕಿ ಪ್ರಸನ್ನಾ ಚೆಕ್ಕೆಮನೆ ಅವರಿಗೆ ಮುಳ್ಳೇರಿಯ ಮಂಡಲದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಅಕ್ಟೋಬರ್ 30 ರಂದು ಗೋಕರ್ಣದ ಅಶೋಕೆಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದ ಕುರಿತಾದ ಮಾಹಿತಿ ನೀಡಿ ವಲಯದ ಎಲ್ಲಾ ಕಾರ್ಯಕರ್ತರೂ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಮಾಣಿಮಠದ ಶಿಲಾಮಯ ಗರ್ಭಗುಡಿ ನಿರ್ಮಾಣದ ನಿಧಿ ಸಂಗ್ರಹ, ಕಾರ್ಯಕರ್ತರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ವಲಯದ ಪ್ರತೀ ಮನೆಗೂ ತಲುಪಿಸುವ ಅಭಿಯಾನವನ್ನು ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ನವೆಂಬರ್ ತಿಂಗಳಲ್ಲಿ ವಲಯೋತ್ಸವ ನಡೆಸುವ ವಿಚಾರವನ್ನು ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿ ಇದರ ರೂಪುರೇಷೆಗಳ ಬಗ್ಗೆ ನಿರ್ಧಾರಕ್ಕೆ ಬರಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶ್ರೀಮುಖದ ಮಾತೃತ್ವಮ್ ಲೇಖಕಿ ಪ್ರಸನ್ನಾ ವಿ ಚೆಕ್ಕೆಮನೆ ಅವರ ಸಾಹಿತ್ಯಕ್ಷೇತ್ರದ ಸಾಧನೆಗೆ ಶುಭಹಾರೈಸಿದ ಸಭಾಧ್ಯಕ್ಷರು ಶ್ರೀಮಠದ ಎಲ್ಲಾ ಯೋಜನೆಗಳಿಗೆ ವಲಯದ ಪ್ರತಿಯೊಬ್ಬರ ಸಹಕಾರವನ್ನು ಕೋರಿದರು.

ಮುಳ್ಳೇರಿಯ ಮಂಡಲ ಅಧ್ಯಕ್ಷರಾಗಿ, ವಿವಿವಿಯ ನಿರ್ದೇಶಕರಾಗಿ ಮತ್ತು  ಶ್ರೀಮಠದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಯ ಚೇತನ ಪ್ರೊ. ಟಿ. ಶ್ರೀಕೃಷ್ಣ ಭಟ್ ಅವರ ಆತ್ಮಕ್ಕೆ ವಿಷ್ಣುಸಾಯೂಜ್ಯ ಪ್ರಾಪ್ತಿಗಾಗಿ ಶ್ರೀರಾಮ ತಾರಕ ಮಂತ್ರ ಜಪಿಸಲಾಯಿತು. ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post