ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶನಿವಾರ ಬ್ಯಾಗ್ ಲೆಸ್ ಡೇ ಆಚರಿಸಲು ಸರ್ಕಾರ ಚಿಂತನೆ

ಶನಿವಾರ ಬ್ಯಾಗ್ ಲೆಸ್ ಡೇ ಆಚರಿಸಲು ಸರ್ಕಾರ ಚಿಂತನೆ

 


ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶನಿವಾರ ಬ್ಯಾಗ್ ಹೊರೆಯಿಂದ ಮುಕ್ತಿ ನೀಡುವ ಚಿಂತನೆ ನಡೆಸಿದೆ.


ಪ್ರತಿನಿತ್ಯ ಪುಸ್ತಕದ ಭಾರ ಹೊತ್ತು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಶನಿವಾರ ಬ್ಯಾಗ್ ಬೆನ್ನಿಗೇರಿಸಿ ಮಕ್ಕಳು ಶಾಲೆಗೆ ಹೋಗಬೇಕಾದ ಅಗತ್ಯ ಇಲ್ಲ. ರಾಜ್ಯದಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ ಆಚರಿಸಲು ಸರ್ಕಾರ ಚಿಂತನೆ ನಡೆದಿದೆ.


ಶನಿವಾರ ಪಾಠದ ಬದಲಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಶಿಕ್ಷಣ ಸಚಿವ ನಾಗೇಶ್ ಅವರು ಈ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇಯೇ ಈ ಬಗ್ಗೆ ಅಂತಿಮ ಆದೇಶ ಹೊರ ಬೀಳುವ ನಿರೀಕ್ಷೆಯಿದೆ. ವಾರದ ಒಂದು ದಿನ ಮಕ್ಕಳಿಗೆ ಬ್ಯಾಗ್ ಹೊರೆಯಿಂದ ಮುಕ್ತಿ ಸಿಕ್ಕರೆ ಒಳ್ಳೆಯದು ಅಲ್ಲವಾ..?. 

ಹಾಗೆಯೇ 1 ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣ ಕಡ್ಡಾಯ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಸಚಿವ ಬಿ.ಸಿ ನಾಗೇಶ್ ಮುಖ್ಯ ಮಾಹಿತಿ ನೀಡಿದ್ದು, ಒಂದನೇ ತರಗತಿಗೆ ಮಗು ಸೇರಿಸಲು ಆರು ವರ್ಷ ಪೂರ್ಣಗೊಂಡಿರಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.


ಈ ಕುರಿತು ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದನೇ ತರಗತಿಗೆ ಶಾಲೆಗೆ ಸೇರಿವುದಕ್ಕೆ ಮಗುವಿಗೆ 6 ವರ್ಷ ಪೂರ್ಣವಾಗುವುದು ಕಡ್ಡಾಯವಾಗಿದೆ . ಈ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ ಎಂದರು.


ಈಗಾಗಲೇ ಇತರ 23 ರಾಜ್ಯಗಳಲ್ಲಿ ಈ ನಿಯಮ ಜಾರಿಗೆ ತರಲಾಗಿದ್ದು, ಕರ್ನಾಟಕದಲ್ಲಿ ಕೂಡ ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಲು 6 ವರ್ಷ ಕಡ್ಡಾಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.


0 Comments

Post a Comment

Post a Comment (0)

Previous Post Next Post