ಪೆರ್ಲ: ಶೇಣಿ ಶ್ರೀಶಾರದಾಂಬ ಹೈಸ್ಕೂಲಿನಲ್ಲಿ ಶಾಲಾ ಮಟ್ಟದ ಕಲೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಕಲೋತ್ಸವದಲ್ಲಿ ವೇದಿಕೆಯೇತರ ಹಾಗೂ ಕಲಾ ಸ್ಪರ್ಧೆಗಳು ಜರಗುತ್ತಿದೆ. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ "ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಶಾಲಾ ಕಲೋತ್ಸವ ಸೂಕ್ತ ವೇದಿಕೆಯಾಗಿದ್ದು ಇಲ್ಲಿ ಸ್ಪರ್ಧಾ ಮನೋಭಾವಕ್ಕಿಂತಲೂ ಕಲಾ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು" ಎಂದರು.
ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಎಂ.ಪಿ. ಸಭೆಯ ಅಧ್ಯಕ್ಷತೆವ ಹಿಸಿದ್ದರು. ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಎಸ್.ಎಸ್.ಎ.ಯು.ಪಿ ಶಾಲಾ ಪ್ರಬಂಧಕಿ ಶಾರದ ವೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ.ಸೋಜ, ಉಪಾಧ್ಯಕ್ಷ ಉಮ್ಮರ್ ಕಂಗುಮೂಲೆ, ಹಿರಿಯ ಶಿಕ್ಷಕಿ ಹೈಮಾವತೀ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
Post a Comment