ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ಲಂ ಗಳಲ್ಲಿ ವಾಸಿಸುವ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಕುಟುಂಬಕ್ಕೆ 5 ಸಾವಿರ ರೂ. ಚೆಕ್ ವಿತರಣೆ- ಕೆಜಿಎಫ್ ಬಾಬು

ಸ್ಲಂ ಗಳಲ್ಲಿ ವಾಸಿಸುವ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಕುಟುಂಬಕ್ಕೆ 5 ಸಾವಿರ ರೂ. ಚೆಕ್ ವಿತರಣೆ- ಕೆಜಿಎಫ್ ಬಾಬು

 


ಬೆಂಗಳೂರು: ಸ್ಲಂಗಳಲ್ಲಿ ವಾಸ ಮಾಡುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ರೂಪದಲ್ಲಿ ನನ್ನ ಚಾರಿಟೇಬಲ್ ಫೌಂಡೇಷನ್ ವತಿಯಿಂದ 5 ಸಾವಿರ ರೂಪಾಯಿ ಚೆಕ್‌ ವಿತರಣೆ ಮಾಡುತ್ತಿದ್ದೇನೆ ಎಂದು ಕೆಜಿಎಫ್‌ ಬಾಬು ಹೇಳಿದ್ದಾರೆ.

ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಕೋಟಿ ರೂ. ಹಣವನ್ನು ಮೀಸಲಿರಿಸಿದ್ದೇನೆ. 180 ಕೋಟಿ ರೂ. ವೆಚ್ಚದಲ್ಲಿ 3000 ಮನೆಗಳನ್ನು ನಿರ್ಮಿಸಿ ಕೊಡಲು ಮುಂದಾಗಿರುವ ನಮಗೆ ಹಲವಾರು ರೀತಿಯಲ್ಲಿ ತೊಡಕುಗಳುಂಟಾಗಿವೆ ಎಂದರು.


ಕ್ಷೇತ್ರದ 50 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಇದನ್ನು ಆರ್.ವಿ.ದೇವರಾಜ್ ಮತ್ತು ಅವರ ತಂಡದವರು ಪ್ರಶ್ನಿಸಿ, ನನ್ನ ಚೆಕ್ ವಿತರಣೆ ಕಾರ್ಯಕ್ಕೆ ಬೆದರಿಕೆ ಹಾಕುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


0 Comments

Post a Comment

Post a Comment (0)

Previous Post Next Post