ಬೆಂಗಳೂರಿನ ದೃಷ್ಟಿ ಮೀಡಿಯಾ ನಿರ್ಮಾಣದ ಸುಳ್ಯದ ಹೆಮ್ಮೆಯ ನಿರ್ದೇಶಕ ಸಂತೋಷ್ ಕೋಡಂಕೇರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ಪ್ರೊಡಕ್ಷನ್ ನಂಬರ್- 2 ಚಲನಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಸುಳ್ಯದ ಕಲಾವಿದರು ನಟಿಸುತ್ತಿದ್ದಾರೆ.
ಬೆಂಗಳೂರಿನ ಹೆಸರಾಂತ ಕಂಠಿರವ ಸ್ಟುಡಿಯೋದಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ನಟ ನಿರ್ದೇಶಕ ಮತ್ತು ಜ್ಯೋತಿಷ್ಯರಾದ ಎಚ್. ಭೀಮರಾವ್ ವಾಷ್ಠರ್, ತಿರುಮಲೇಶ್ವರಿ ಅರ್ಬಡ್ಕ ಜಾಲ್ಸೂರು, ಸುಮತಿ ನಾಯಕ್ ಸುಳ್ಯ, ಹರ್ಷಿತ್ ಕೆ ಸುಳ್ಯ, ರಜಾಕ್ ಸುಳ್ಯ, ದರ್ಶನ್ ಸುಳ್ಯ ಶೂಟಿಂಗಲ್ಲಿ ಭಾಗವಹಿಸಿದ್ದರು. ಚಿತ್ರದ ಕಥೆ ಬರೆದ ಪಾವನ ಸಂತೋಷ್ ಸುಳ್ಯ ರವರು ಕೂಡ ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
إرسال تعليق