ಹುಬ್ಬಳ್ಳಿ : ರಿಷಬ್ ಶೆಟ್ಟಿ ನಿರ್ದೇಶನದ ʻ ಕಾಂತಾರ ಸಿನಿಮಾʼ ವಿರುದ್ಧ ನಟ ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮ ಜೊತೆ ಪ್ರತಿಕ್ರಿಯೆ ನೀಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಚೇತನ್ ಒಬ್ಬ ನಟನೂ ಆಗಿಲ್ಲ.. ಎಡಪಂಥೀಯ ವ್ಯಕ್ತಿಯೂ ಆಗಿಲ್ಲ. ಕಾಂತಾರ ಚಿತ್ರದಂತೆ ತನ್ನ ಸಿನಿಮಾ ಹಿಟ್ ಆಗಲ್ಲ ಅಂತ ಹೊಟ್ಟೆ ಕಿಚ್ಚು ಆಕಾಶಕ್ಕೆ ಮುಖ ಮಾಡಿ ಉಗುಳುವ ಕೆಲಸ ಮಾಡಿದ್ದಾರೆ.
ಬುಡಕಟ್ಟು ಜನಾಂಗವನ್ನು ಹಿಂದೂ ಧರ್ಮದಿಂದ ಬೇರೆ ಮಾಡೋ ಹುನ್ನಾರ ನಡೆಯುತ್ತಿದೆ. ಎಂದು ಹುಬ್ಬಳ್ಳಿಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
إرسال تعليق