ಬೆಂಗಳೂರು: ದೇಸಿ ಸೀರೆ ಉಟ್ಟ ಮಹಿಳೆಯರು ಸೀರೆಯಲ್ಲೇ ಓಡಿ ದೈಹಿಕ ಚಟುವಟಿಕೆ ಕುರಿತು ಜಾಗೃತಿ ಮೂಡಿಸಿದರು.
ತನೈರಾ ಸಂಸ್ಥೆಯು ಭಾನುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ 3 ಕಿ.ಮೀ ಉದ್ದದ 'ಸೀರೆ ಉಟ್ಟ ನಾರಿಯರ ಓಟದ ಸ್ಪರ್ಧೆ'ಗೆ (ರನ್ ವಿತ್ ಸ್ಯಾರಿ) ಕ್ಷೇತ್ರದ ಶಾಸಕ ಮತ್ತು ಸಚಿವ ಸಿ ಎನ್ ಅಶ್ವತ್ಥ ನಾರಾಯಣ ಚಾಲನೆ ನೀಡಿದರು.
18ನೇ ಅಡ್ಡರಸ್ತೆಯ ಮೈದಾನದಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಾವಿರಾರು ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಚಿವರು, ಆರೋಗ್ಯದ ಗುಟ್ಟನ್ನು ಅರಿತರೆ ಬದುಕಿನ ಗುಟ್ಟನ್ನೇ ತಿಳಿಯಬಹುದು ಎಂದರು.
ಇದೇ ವೇಳೆ ದೇಸಿ ಉಡುಗೆಯಲ್ಲಿ ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಬಹುದು. ಇಂತಹ ಚಟುವಟಿಕೆಗಳಿಂದ ಮಹಿಳೆಯರಿಗೂ ಖುಷಿ ಸಿಗುತ್ತದೆ ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق