ಮಂಗಳೂರು: ಶ್ರೀ ಭಾರತಿ ಸೌಹಾರ್ದ ಸಹಕಾರಿ (ನಿಯಮಿತ) ಇದರ ವಾರ್ಷಿಕ ಮಹಾಸಭೆ ಸೆ. 18 ರ ಭಾನುವಾರ ನಂತೂರಿನ ಶಂಕರಶ್ರೀ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷರಾದ ಜಿ.ಕೆ. ಭಟ್ ಕೊಣಾಜೆ ಆರಂಭದಲ್ಲಿ ಸರ್ವ ಸದಸ್ಯರನ್ನು ಸ್ವಾಗತಿಸಿದರು. ಬಳಿಕ ಮುಖ್ಯ ಕಾರ್ಯನಿರ್ವಾಹಕರಾದ ರಾಮಪ್ರಸಾದ್ ಎಂ. ಕಳೆದ ಹಾಗೂ ಹಿಂದಿನ ವರ್ಷದ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಅಧ್ಯಕ್ಷರು ನೂತನ ವರ್ಷದ ಯೋಜನೆ ಮತ್ತು ಆಯವ್ಯಯಗಳ ಮಂಡನೆ ಮಾಡಿದರು. ಸದಸ್ಯರು ಒಪ್ಪಿಗೆ ಸೂಚಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶಾಸ್ತ್ರಿ ಕೆ., ನಿರ್ದೇಶಕರಾದ ಪಿ. ಎಸ್. ಭಟ್, ಜಿ. ಕೆ. ಭಟ್ ಸೇರಾಜೆ, ಗೋಪಾಲಕೃಷ್ಣ ಕೆ., ವೆಂಕಟರಮಣ ಭಟ್ ಕಬೆಕ್ಕೋಡು, ಶ್ರೀಮತಿ ಅನಿತಾ, ಶ್ರೀಮತಿ ವಸಂತಿ ಎಸ್. ಭಟ್ ಮತ್ತು ಸುಬ್ರಹ್ಮಣ್ಯ ಭಟ್ ಟಿ. ಉಪಸ್ಥಿತರಿದ್ದರು.
ಲೆಕ್ಕ ಪರಿಶೋಧಕರಾದ ವಿಶ್ವೇಶ್ವರ, ಪಿ. ಉಪಸ್ಥಿತರಿದ್ದರು. ಅದಿಕ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದು ಮಹಾಸಭೆಯನ್ನು ಯಶಸ್ವಿಗೊಳಿಸಿದರು. ಕೊನೆಯಲ್ಲಿ ನಿರ್ದೇಶಕ ಮಂಡಳಿಯ ಸುಬ್ರಹ್ಮಣ್ಯ ಭಟ್ ಟಿ. ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق