ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಳಿಕೆ ಕಂಡಿದ್ದ ಟೊಮೆಟೊ ದರ ಮತ್ತೆ ಏರಿಕೆ

ಇಳಿಕೆ ಕಂಡಿದ್ದ ಟೊಮೆಟೊ ದರ ಮತ್ತೆ ಏರಿಕೆ



ಮಂಗಳೂರು : ಕೆಲವು ದಿನಗಳಿಂದ ಭಾರಿ ಇಳಿಕೆ ಕಂಡಿದ್ದ ಟೊಮೆಟೊ ದರ ಮತ್ತೆ ಏರಿಕೆಯಾಗಿದೆ.


ಕೆಜಿಗೆ 10 ರೂಪಾಯಿ ಇದ್ದ ಟೊಮೆಟೊ 20 ರೂಪಾಯಿವರೆಗೆ ಏರಿಕೆ ಕಂಡು ಈಗ ಪುತ್ತೂರಿನಲ್ಲಿ 45 ರೂ.ಗೆ ಮಾರಾಟವಾಗುತ್ತಿದೆ.


ಕೆಲವು ತಿಂಗಳ ಹಿಂದೆ ಟೊಮೆಟೊ ದರ 10 ರೂ.ಇದ್ದು, ನಂತರ 20 ರೂ. ಗೆ ಬಂದು ನಿಂತಿತ್ತು. ಕೆಲವೇ ದಿನಗಳ ನಂತರ ಮತ್ತೆ ಏರಿಕೆ ಕಾಣುತ್ತಿರುವ ಟೊಮೆಟೊ ದರ ಕೆಜಿಗೆ 45 ರೂ.ಗೆ ಮಾರಾಟವಾಗುತ್ತಿದೆ.


ಅದಕ್ಕಿಂತ ಹಿಂದೆ ಕೆಜಿಗೆ 100 ರೂ.ವರೆಗೆ ಏರಿಕೆಯಾಗಿತ್ತು. ಈಗ ಭಾರಿ ಮಳೆಯ ಕಾರಣ ಬೆಳೆ ಹಾಳಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ದರ ಏರಿಕೆಯಾಗಿದೆ.


0 تعليقات

إرسال تعليق

Post a Comment (0)

أحدث أقدم