ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರವಾಹಿ ಕೊನೆಗೊಳಿಸಿದ ಕಲರ್ಸ್ ಕನ್ನಡ

ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರವಾಹಿ ಕೊನೆಗೊಳಿಸಿದ ಕಲರ್ಸ್ ಕನ್ನಡ

 


ಬೆಂಗಳೂರು:  ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಆರಂಭವಾಗಲು ಕೆಲವೇ ದಿನ ಬಾಕಿಯಿದೆ. ಹೀಗಾಗಿ ಈ ಕಲರ್ಸ್ ವಾಹಿನಿ ಬಿಗ್ ಬಾಸ್ ಶೋ ಪ್ರಸಾರಕ್ಕೆ ಸಮಯ ನಿಗದಿಪಡಿಸಲು ಕೆಲವೊಂದು ಧಾರವಾಹಿಗಳಿಗೆ ಕತ್ತರಿ ಹಾಕಲು ಹೊರಟಿದೆ.


ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿದೆ. ಹೀಗಾಗಿ ಕಲರ್ಸ್ ವಾಹಿನಿ ತನ್ನ ಜನಪ್ರಿಯ ಧಾರವಾಹಿಗಳಾದ ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಮತ್ತು ನನ್ನರಸಿ ರಾಧೆ ಎಂಬ ಮೂರು ಧಾರವಾಹಿಗಳನ್ನು ಅಂತ್ಯಗೊಳಿಸುತ್ತಿದೆ.


ಈ ಜೊತೆಗೆ ನಮ್ಮನೆ ಯುವರಾಣಿ ಮತ್ತು ಮಂಗಳ ಗೌರಿ ಮದುವೆ ಈಗಾಗಲೇ 1000 ಸಂಚಿಕೆಗಳನ್ನು ದಾಟಿ ಎಷ್ಟೋ ದಿನಗಳಾಗಿವೆ. ನನ್ನರಸೆ ರಾಧೆ 650 ಪ್ಲಸ್ ಸಂಚಿಕೆಗಳನ್ನು ಕಂಡಿದೆ. 


ಇನ್ನೂ ಕನ್ಯಾಕುಮಾರಿ 300 ಪ್ಲಸ್ ಸಂಚಿಕೆ ಪ್ರಸಾರವಾಗಿದೆಯಷ್ಟೇ. ಬಿಗ್ ಬಾಸ್ ಗಾಗಿ ಮೂರು ಕಡಿಮೆ ಟಿಆರ್ ಪಿ ಬರುವ ಧಾರವಾಹಿಗಳನ್ನು ಕಲರ್ಸ್ ವಾಹಿನಿ ಸ್ಥಗಿತಗೊಳಿಸುತ್ತಿದೆ.

0 تعليقات

إرسال تعليق

Post a Comment (0)

أحدث أقدم