ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ ಮಗನ ಹುಟ್ಟುಹಬ್ಬ

ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ ಮಗನ ಹುಟ್ಟುಹಬ್ಬ

 


ಬೆಂಗಳೂರು: ಜಾತ್ಯತೀತ ಜನತಾ ದಳದ ಯುವ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಅವರು ತಮ್ಮ ಮಗನ ಆವ್ಯಾನ್ ದೇವ್ ಮೊದಲ ಹುಟ್ಟುಹಬ್ಬವನ್ನು ಶನಿವಾರ ಸರಳವಾಗಿ ಆಚರಿಸಿದರು.


ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರು ಮರಿ ಮೊಮ್ಮಗನನ್ನು ಆಶೀರ್ವದಿಸಿದರು.


ಬೆಳಗ್ಗೆ ನಿಖಿಲ್‌ ಕುಮಾಸ್ವಾಮಿ ಕುಟುಂಬ ಸಮೇತ ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಹಾಗೂ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ತಮ್ಮ ಮಗನ ಹೆಸರಿನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.


 ಬಳಿಕ, ಅಲ್ಲಿಯೇ ಅಭಿಮಾನಿಗಳು ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕೇಕ್‌ ಕತ್ತರಿಸಿ ಆವ್ಯಾನ್ ದೇವ್​ಗೆ ಶುಭ ಹಾರೈಸಿದರು.



0 تعليقات

إرسال تعليق

Post a Comment (0)

أحدث أقدم