ಬೆಂಗಳೂರು: ಸಂಗೀತ ಲೋಕದ ದಿಗ್ಗಜ ಎಸ್‍ಪಿಬಿಯವರ 2ನೇ ವರ್ಷದ ಪುಣ್ಯತಿಥಿಯನ್ನು ಇಂದು(ಸೆ.25) ಆಚರಿಸಲಾಗುತ್ತಿದೆ. ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಮತ್ತು ಅಭಿಮಾನ ಹೊಂದಿದ್ದ ಎಸ್‍ಪಿಬಿಯವರು 'ಮುಂದಿನ ಜನ್ಮವೇನಾದರೂ ಇದ್ದರೆ ಅದು ಕರುನಾಡಿನಲ್ಲೇ ಹುಟ್ಟುತ್ತೇನೆ. ಇಲ್ಲಿನ ಜನರ ಪ್ರೀತಿಯ ಋಣ ತೀರಿಸುತ್ತೇನೆ' ಅಂತಾ ಹೇಳಿಕೊಂಡಿದ್ದರು.
ಬಾಲಸುಬ್ರಹ್ಮಣ್ಯಂರನ್ನು ಕಳೆದುಕೊಂಡ ನೋವು ಎಂದೂ ಮರೆಯಾಗುವಂಥದ್ದಲ್ಲ. ಭೌತಿಕವಾಗಿ ಎಸ್ಪಿಬಿಯವರು ಇಹಲೋಕ ತ್ಯಜಿಸಿದ್ದರೂ ಅವರ ಹಾಡುಗಳ ಮೂಲಕ ಸದಾ ಜೀವಂತವಾಗಿದೆ.
2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನೂರಾರು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳು ಅವರಿಗೆ ನಮನ ಸಲ್ಲಿಸುತ್ತಿದ್ದಾರೆ.
إرسال تعليق