ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜವಾಬ್ದಾರಿಗಳನ್ನು ಅರಿತು ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಕೈಗೊಂಡರೆ ಅಭಿವೃದ್ದಿ ಸಾಧ್ಯ: ಶ್ರೀ ಪಡ್ರೆ

ಜವಾಬ್ದಾರಿಗಳನ್ನು ಅರಿತು ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಕೈಗೊಂಡರೆ ಅಭಿವೃದ್ದಿ ಸಾಧ್ಯ: ಶ್ರೀ ಪಡ್ರೆ


ನಿಟ್ಟೆ: “ಪ್ರತಿಯೋರ್ವ ಮಾನವನೂ ಅವನವನ ಸ್ಥಾನವನ್ನು ಹಾಗೂ ಕರ್ತವ್ಯಗಳನ್ನರಿತು ಧನಾತ್ಮಕ ಚಿಂತನೆಯೊಂದಿಗೆ ಶ್ರಮವಹಿಸಿ ಕಾರ್ಯಕೈಗೊಂಡರೆ ಏಳಿಗೆ ಕಾಣಲು ಸಾಧ್ಯ” ಎಂದು ಮಳೆಕೊಯ್ಲು ತಜ್ಞ, ಕೃಷಿಕ ಹಾಗೂ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಅವರು ಅಭಿಪ್ರಾಯಪಟ್ಟರು.


ಅವರು ನಿಟ್ಟೆ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


"ಶಿಕ್ಷಕರು ಹಾಗೂ ಇಂಜಿನಿಯರ್ ಗಳು ಸಮಾಜದ ವಿವಿಧ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಮಾರ್ಗಗಳನ್ನು ಕಾಣುವಲ್ಲಿ ಶ್ರಮವಹಿಸಿದರೆ ಅದೆ‍ಷ್ಟೋ ಸುಧಾರಣೆಗಳಿಗೆ ದಾರಿಯಾಗಬಹುದು. ಸಾಗರ ತಾಲೂಕಿನ ವನಶ್ರೀ ಮಂಜಪ್ಪರಂತಹ ಶಿಕ್ಷಕಕರು ಹಾಗೂ ಸುಳ್ಯದ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರಂತಹ ಇಂಜಿನಿಯರುಗಳ ನಿಸ್ವಾರ್ಥ ಸೇವೆ, ದೃಢಸಂಕಲ್ಪ, ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ವಹಿಸಲಾದ ಆಸಕ್ತಿಯು ನಮಗೆ ಜೀವನದಲ್ಲಿ ಆದರ್ಶಪ್ರಾಯವಾಗಬೇಕು" ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ ಹೆಗ್ಡೆ ಮಾತನಾಡಿ "ಗುರುವೆಂಬವನು ಶಿಕ್ಷಣದೊಂದಿಗೆ ಜೀವನದ ಬಗೆಗೂ ತಿಳಿಹೇಳುವವನಾಗಿರುತ್ತಾನೆ. ತಾಂತ್ರಿಕ ಕಾಲೇಜಿನ ಶಿಕ್ಷಕರು ತಮ್ಮ ಪಿ.ಎಚ್.ಡಿ ಅನಂತರವೂ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯವಾಗಿದೆ. ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಚಿಂತನೆಗಳನ್ನ ಪ್ರತಿಯೋರ್ವ ಮಾನವನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಏಳಿಗೆಗೆ ಶ್ರಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ನಿಟ್ಟೆ ಸಂಸ್ಥೆಯ ಆಡಳಿತ ಮಂಡಳಿ ಎಂದಿಗೂ ಪ್ರೋತ್ಸಾಹಿಸುತ್ತದೆ" ಎಂದರು.


2021-2022 ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಡಾ| ಸ್ನೇಹಾ ನಾಯಕ್, ಡಾ| ಲೊಯೆಲ್ಲಾ ಕನ್ಸೆಪ್ಟಾ ಗೋವಿಯಸ್, ಸಿವಿಲ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಶೇಖ್ ಕಬೀರ್ ಅಹ್ಮದ್, ಡಾ| ರಂಜಿತ್ ಎ, ಸಹಾಯಕ ಪ್ರಾಧ್ಯಾಪಕ ಡಾ| ಪುಷ್ಪರಾಜ್, ಕಂಪ್ಯೂಟರ್‌ಸೈನ್ಸ್ ವಿಭಾಗದ  ಸಹಪ್ರಾಧ್ಯಾಪಕ ಡಾ| ರಾಜು ಕೆ,  ಸಹಾಯಕ ಪ್ರಾಧ್ಯಾಪಕರಾದ ಡಾ| ರಘುನಂದನ್ ಕೆ.ಆರ್, ಡಾ| ಪ್ರದೀಪ್ ಕಾಂಚನ್, ಡಾ| ಸನ್ನಿಧಾನ್ ಎಂ.ಎಸ್, ಇಲೆಕ್ಟ್ರಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಕೃಷ್ಣ ರಾವ್, ಡಾ| ಗಿರೀಶ್ ಜೋಶಿ, ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ| ಸುಕೇಶ್ ರಾವ್ ಎಂ, ಸಹಪ್ರಾಧ್ಯಾಪಕಿ ಡಾ| ಶ್ರೀವಿದ್ಯಾ ಜಿ, ಸಹಾಯಕ ಪ್ರಾಧ್ಯಾಪಕಿ ಡಾ| ಅನು‍ಷಾ ಆರ್, ಸಹಾಯಕ ಪ್ರಾಧ್ಯಾಪಕ ಡಾ| ಬೊಮ್ಮೇಗೌಡ ಕೆ.ಬಿ, ಇನ್ಫೋರ್ಮೇಶನ್‌ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅಭೀರ್ ಭಂಡಾರಿ, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಆಸ್ಟಿನ್ ದಿನೇಶ್ ಡಿಸೋಜಾ, ಡಾ| ವಿಶ್ವನಾಥ್ ಜೆ.ಎಸ್, ಡಾ| ದಿಲೀಪ್ ಕುಮಾರ್ ಕೆ, ಡಾ| ಕೃಷ್ಣಪ್ರಸಾದ್ ಎಸ್, ಎಂ.ಸಿ.ಎ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪಲ್ಲವಿ ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ ಡಾ| ಸ್ಪೂರ್ತಿ ಬಿ ಶೆಟ್ಟಿ, ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಸರ್ವಜಿತ್ ಎಂ.ಎಸ್ ಸನ್ಮಾನ ಸ್ವೀಕರಿಸಿದರು. ಇಂಜಿನಿಯರ್ಸ್ ಡೇ ಆಚರಣೆಯ ಅಂಗವಾಗಿ ಮಳೆಕೊಯ್ಲು ತಜ್ಞ, ಕೃಷಿಕ ಹಾಗೂ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಅವರನ್ನು ಸನ್ಮಾನಿಸಲಾಯಿತು. 

ಇದೇ ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ವಾರ್ಷಿಕ ಪತ್ರಿಕೆ 'ನಿದರ್ಶನ್'ನ್ನು ಶ್ರೀ ಪಡ್ರೆಯವರು ಬಿಡುಗಡೆಗೊಳಿಸಿದರು.


ನಿಟ್ಟೆ ಕ್ಯಾಂಪಸ್‌ ಮೈಂಟೆನೆನ್ಸ್ & ಡೆವಲಪ್ಮೆಂಟ್ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಅತಿಥಿಯನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಡಾ| ನರಸಿಂಹ ಬೈಲ್ಕೇರಿ, ಡೀನ್ ಸ್ಟೂಡೆಂಟ್ ವೆಲ್ಫೇರ್ ವಂದಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳ ಸಂಯೋಜಕ ಸಹಪ್ರಾಧ್ಯಾಪಕ ಡಾ| ಜೊಯ್ ಮಾರ್ಟೀಸ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم