ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಳ್ಳಾಲ ಗೃಹ ರಕ್ಷಕರಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರ ಅಭಿಯಾನ

ಉಳ್ಳಾಲ ಗೃಹ ರಕ್ಷಕರಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರ ಅಭಿಯಾನ

 ಕಡಲ ತೀರದ ಸ್ವಚ್ಚತೆ ನಮ್ಮೆಲ್ಲರ ಹೊಣೆಗಾರಿಕೆ: ಡಾ ಚೂಂತಾರು



ಉಳ್ಳಾಲ: ಕಡಲ ತೀರದ ಸ್ವಚ್ಚತೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ಪ್ರಜೆಯೂ ಇದರಲ್ಲಿ ಪಾಲ್ಗೊಳ್ಳಬೇಕು. ಕಡಲ ತೀರದ ತ್ರಾಜ್ಯ ನಿರ್ವಹಣೆಯಲ್ಲಿ ಪ್ರತಿ ಪ್ರಜೆಯೂ ಕೈ ಜೋಡಿಸಬೇಕು. ಪ್ರವಾಸಿಗರೂ ಇದರಲ್ಲಿ ಸಹಕರಿಸಬೇಕು. ಹಾಗಾದರೆ ಮಾತ್ರ ಕಡಲ ತೀರ ಸ್ವಚ್ಚವಾಗಬಹುದು ಎಂದು ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.


ಇಂದು ಭಾನುವಾರ (ಸೆ.18) ಸೋಮೇಶ್ವರ ಕಡಲ ತೀರದಲ್ಲಿ ಉಳ್ಳಾಲ ಗ್ರಹ ರಕ್ಷಕ ದಳದ ವತಿಯಿಂದ ಸ್ವಚ್ಚ ಕಡಲು ಸ್ವಚ್ಚ ಸಾಗರ ಅಭಿಯಾನ ಜರುಗಿತು. ಉಳ್ಳಾಲ ಘಟಕದ ಹಿರಿಯ ಗ್ರಹ ರಕ್ಷಕರಾಗಿ ಶ್ರೀ ಸುನಿಲ್, ಹಮೀದ್ ಪಾವಳ, ದಿವ್ಯಾ ಪೂಜಾರಿ, ಧನಂಜಯ್, ಪ್ರಸಾದ್ ಸುವರ್ಣ, ಅಬ್ದುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 100 ಕೆಜಿ ಗಿಂತಲೂ ಅಧಿಕ ತ್ಯಾಜ್ಯ ಸಂಗ್ರಹಣ ಮಾಡಲಾಯಿತು. ಸುಮಾರು 20 ಗೃಹ ರಕ್ಷಕರು ಈ ಅಭಿಯಾನದಲ್ಲಿ ಪಾಲ್ಗೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

0 تعليقات

إرسال تعليق

Post a Comment (0)

أحدث أقدم