ಬದಿಯಡ್ಕ: ಶ್ರೀ ಕ್ಷೇತ್ರ ಆವಳಮಠ ಬಾಯಾರು ಇದರ ಆಡಳಿತ ಮೊಕ್ತೇಸರರಾಗಿ, ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆವಳಮಠ ಗಣಪತಿ ಭಟ್ ಇವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ (17/9/2022) ನಿಧನರಾದರು.
ಅವರು ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತ ಸಮುದಾಯಕ್ಕೆ ಸದಾ ನಗುಮೊಗದ ಸೇವೆ ಸಲ್ಲಿಸುತ್ತಿದ್ದ ಮಿತಭಾಷಿ, ಸರಳ-ಸಜ್ಜನ, ಅಜಾತಶತ್ರು ಎಂದೇ ಹೆಸರಾಗಿದ್ದರು.
ಅವರಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು, ಬಂಧುಬಳಗ ಮತ್ತು ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.
ಕರಾಡ ಸಮಾಜದ ಬಗ್ಗೆ ವಿಶೇಷ ಕಳಕಳಿ, ಸಂಘಟನಾ ಚತುರತೆ, ಯಾವುದೇ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸುವುದು ಅವರ ಆಸಕ್ತಿ ಮತ್ತು ಸೇವೆಯ ಕ್ಷೇತ್ರಗಳಾಗಿದ್ದವು.
ಅನೇಕ ನಿತ್ಯ ನೈಮಿತ್ತಿಕ ಕೆಲಸಗಳ ಜೊತೆಗೆ ಸಹಸ್ರಚಂಡಿಕಾಯಾಗ, ಬ್ರಹ್ಮಕಲಶೋತ್ಸವ, ಹಲವಾರು ಅಭಿವೃದ್ಧಿ ಕಾರ್ಯಗಳು ಇವರ ನೇತೃತ್ವದಲ್ಲಿ ಬಾಯಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಂಪನ್ನಗೊಂಡಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق