ಉತ್ತರಪ್ರದೇಶ : ಮೊಬೈಲ್ ಪೋನ್ ಬ್ಯಾಟರಿ ಸ್ಫೋಟ ಗೊಂಡು 8 ತಿಂಗಳ ಮಗು ಸಾವನ್ನಪ್ಪಿದ ಘಟನೆಯೊಂದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಆರು ದಿನಗಳ ಹಿಂದೆಯಷ್ಟೇ ಮೊಬೈಲ್ ಪೋನ್ ಖರೀದಿ ಮಾಡಲಾಗಿತ್ತು. ಮೊಬೈಲ್ ಪೋನ್‌ನ ಬ್ಯಾಟರಿ ಊದಿಕೊಂಡಿತ್ತು. ಮಗು ಇರುವ ರೂಂನಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಿ ತಾಯಿ ಕುಸುಮಾ ಕಶ್ಯಪ್ ಹೊರಗೆ ಹೋಗಿದ್ದಳು.
ಈ ವೇಳೆಗೆ ಕೋಣೆಯಲ್ಲಿ ದೊಡ್ಡ ಮಟ್ಟದ ಸದ್ದು ಕೇಳಿಬಂದಿತ್ತು. ತಾಯಿ ಓಡಿ ಹೋಗಿ ನೋಡುವಾಗ ಸ್ಫೋಟದ ತೀವ್ರತೆಗೆ ಮಗು ನಂದಿನಿ ಗಂಭೀರವಾಗಿ ಗಾಯಗೊಂಡಿದ್ದಳು.
ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಪೋಷಕರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Post a Comment