ಅಧ್ಯಕ್ಷರಾಗಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಜಯ ಮಣಿಯಂಪಾರೆ ಪ್ರ.ಕಾರ್ಯದರ್ಶಿ, ಪ್ರಭಾವತಿ ಕೆದಿಲಾಯ ಪುಂಡೂರು ಕೋಶಾಧಿಕಾರಿಯಾಗಿ ಆಯ್ಕೆ
ಬದಿಯಡ್ಕ: ತುಳುನಾಡು ನುಡಿ ಹಾಗೂ ಸಂಸ್ಕೃತಿಯ ಪುನರ್ ಜೀವನಕ್ಕಾಗಿ ಬದಿಯಡ್ಕ ಕೇಂದ್ರಿಕರಿಸಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದ ತುಳುವೆರೆ ಆಯನೋ ಕೂಟದ ನೂತನ ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಪ್ರ. ಕಾರ್ಯದರ್ಶಿಯಾಗಿ ಜಯ ಮಣಿಯಂಪಾರೆ, ಕೋಶಾಧಿಕಾರಿಯಾಗಿ ಪ್ರಭಾವತಿ ಕೆದಿಲಾಯ ಪುಂಡೂರು ಆಯ್ಕೆಯಾಗಿದ್ದಾರೆ.
ಈಬಗ್ಗೆ ಶಾಸ್ತ್ರೀಸ್ ಕಂಪೌಂಡ್ ನ ಸೀತಾರಾಮ ಬಿಲ್ಡಿಂಗ್ ನಲ್ಲಿ ನಡೆದ ಸಭೆಯಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶ್ರೀನಾಥ್ ಕಾಸರಗೋಡು, ಡಾ.ರಾಜೇಶ್ ಆಳ್ವ ಬದಿಯಡ್ಕ, ಭಾಸ್ಕರ ಕೆ, ಪ್ರಜ್ವಲ್ ಆಳ್ವ, ಶಂಕರ ಸ್ವಾಮಿಕೃಪಾ ಮೊದಲಾದವರು ಪಾಲ್ಗೊಂಡಿದ್ದರು. ನೂತನ ಸಮಿತಿ ಉಪಾಧ್ಯಕ್ಷರಾಗಿ ಭಾಸ್ಕರ ಕಾಸರಗೋಡು, ಶ್ರೀನಾಥ್ ಕಾಸರಗೋಡು, ಕಾರ್ಯದರ್ಶಿಗಳಾಗಿ ಶಂಕರ ಸ್ವಾಮಿ ಕೃಪಾ, ರವೀಂದ್ರ ರೈ ಮಲ್ಲಾವರ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಶ್ರೀನಿವಾಸ ಆಳ್ವ ಕಳತ್ತೂರು, ಸುಂದರ ಭಾರಡ್ಕ, ಕೃಷ್ಣ ಡಿ.ಬೆಳಿಂಜ, ಡಾ.ರಾಜೇಶ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.
ಅಕ್ಟೋಬರ್ 10ರಂದು ಅನಂತಪುರದಲ್ಲಿ ನಡೆಯಲಿರುವ ತುಳುಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ಡಾ. ವೆಂಕಟರಾಜ ಪುಣ್ಚಿತ್ತಾಯರ ಜಯಂತಿ ಕಾರ್ಯಕ್ರಮದಂಗವಾಗಿ ಜರಗುವ "ಪುವೆಂಪು ನೆಂಪು- 22" ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಭೆಯು ನಿರ್ಧರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment