ರಾಷ್ಟ್ರೀಯತೆಯನ್ನು ಬೋಧಿಸಿ: ತಿಮ್ಮಣ್ಣ ಆಳ್ವ
ಮುಡಿಪು: ಭಾರತ ಹಲವು ಭಾಷೆ, ಜಾತಿ, ಮತ ಧರ್ಮಗಳ ನಾಡು. ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯತೆ ನಮ್ಮೆಲ್ಲರನ್ನೂ ಒಗ್ಗೂಡಿಸಿದ ಪರಮ ಪವಿತ್ರ ಅಂಶ. ಶಾಲೆ ಕಾಲೇಜುಗಳಲ್ಲಿ ದೇಶಪ್ರೇಮ ಉಂಟಾಗುವಂತಹ ಪಠ್ಯಗಳನ್ನು ಬೋಧಿಸಿ ಎಂದು ಸ್ವಾತಂತ್ರ್ಯ ಚಳವಳಿಯನ್ನು ಕಣ್ಣಾರೆ ಕಂಡ ತೊಂಬತ್ತರ ಹರೆಯದ ಸಾಹಿತಿ ತಿಮ್ಮಣ್ಣ ಆಳ್ವ ಮುಡಿಪು ಹೇಳಿದರು.
ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ನೃತ್ಯ ಲಹರಿ ನಾಟ್ಯಾಲಯ (ರಿ.) ಪಜೀರು ಹಾಗೂ ಸಂತ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಜೀರು ಸಹಯೋಗದೊಂದಿಗೆ 'ಸ್ವಾತಂತ್ರ್ಯ ಅಮೃತ ಮಹೋತ್ಸವ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಸಾಹಿತ್ಯದ ಕುರಿತ ಆಸಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಕಾರ್ಯಕ್ರಮಗಳು ಊರೂರಲ್ಲಿ ನಡೆಯಬೇಕು. ಅದರಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಉಳ್ಖಾಲ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ ಸ್ವಾತಂತ್ರ್ಯ ಒಂದು ಜವಾಬ್ದಾರಿ. ಮಹಾನ್ ಹೋರಾಟಗಾರರ ತ್ಯಾಗ ಬಲಿದಾನ ಸಾರ್ಥಕವಾಗಬೇಕಾದರೆ ನಾವು ಸಮಾನತೆಯ ಸಂವಿಧಾನಬದ್ಧ ಭಾರತೀಯರಾಗಿ ಬದುಕಬೇಕು ಎಂದರು.
ಸಂತ ಜೋಸೆಪ್ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಇನೆಟ್ ಡಿ'ಸೋಜ, ಉಳ್ಳಾಲ ಕಸಾಪ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಪದಾಧಿಕಾರಿಗಳಾದ ಆನಂದ ಅಸೈಗೋಳಿ, ಮಂಜುಳಾ ಜಿ.ರಾವ್ ಇರಾ, ಅಶ್ವಿನಿ ಕುರ್ನಾಡ್, ರವಿಕುಮಾರ್ ಕೋಡಿ, ಚಂದನಾ ಕೆ.ಎಸ್ ಉಪಸ್ಥಿತರಿದ್ದರು.
ನೃತ್ಯ ಲಹರಿಯ ನಿರ್ದೇಶಕಿ ವಿದುಷಿ ರೇಷ್ಮಾ ನಿರ್ಮಲ್ ಭಟ್ ಇವರನ್ನು ಸನ್ಮಾನಿಸಲಾಯಿತು. ನೃತ್ಯಲಹರಿಯ ಸಂಚಾಲಕರಾದ ನಿರ್ಮಲ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೃತ್ಯ ಲಹರಿ ತಂಡದಿಂದ ನೃತ್ಯ ಸಂಭ್ರಮ ಹಾಗೂ ಸಂಪನ್ಮೂಲ ವ್ಯಕ್ತಿ ರಾಜ್ಯ ಯುವ ರಂಗ ಪ್ರಶಸ್ತಿ ವಿಜೇತ ರಾಮಾಂಜಿ, ನಮ್ಮ ಭೂಮಿ ಉಡುಪಿ ಇವರಿಂದ ಸಾಹಿತ್ಯ ವಿಕಸನ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಾದ ೪೦ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق