ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಂಜಾಲಕಟ್ಟೆ: ಭಾರತ ಸಂವಿಧಾನದ ಕುರಿತು ವಿಚಾರ ಸಂಕಿರಣ

ಪುಂಜಾಲಕಟ್ಟೆ: ಭಾರತ ಸಂವಿಧಾನದ ಕುರಿತು ವಿಚಾರ ಸಂಕಿರಣ


 

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ ಇತ್ತೀಚೆಗೆ IQAC ಅಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗ‌ ಮತ್ತು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಭಾರತ ಸಂವಿಧಾನದ ಕುರಿತು ವಿಚಾರಣಾ ಸಂಕಿರಣ ಕಾರ್ಯಕ್ರಮವನ್ನು  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ  ಹಮ್ಮಿಕೊಳ್ಳಲಾಯಿತು.


ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಅನಂತ ಕೃಷ್ಣಭಟ್, ಕೆನರಾ ಕಾಲೇಜು ಮಂಗಳೂರು ಇವರು ಆಗಮಿಸಿ ಸಂವಿಧಾನದ ಕುರಿತು ಮಾಹಿತಿ ನೀಡಿದರು.  ಸಂವಿಧಾನ ಎಂದರೇನು, ಸಂವಿಧಾನದಲ್ಲಿ ಎಷ್ಟು ವಿಧಿಗಳಿವೆ ಸಂವಿಧಾನದ ಪ್ರಾಮುಖ್ಯತೆ ಮಾತ್ರವಲ್ಲದೇ ನಮ್ಮ ಭಾರತ ದೇಶದ ಸಂವಿಧಾನದ ಸಂಪೂರ್ಣ ಮಾಹಿತಿಯನ್ನು ಬಹಳ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಕೆ ಶರತ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವಿನ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೆ ನಾರಾಯಣ ನಾಯಕ್, ರಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶೇಖರ್ ಹಾಗೂ ಉಪನ್ಯಾಸಕಿ ಒಲಿಂಡ ಗೋನ್ಸಾಲ್ವಿಸ್ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ರಮ್ಯಾ‌ ಪ್ರಾರ್ಥಿಸಿದರು. ಅಶ್ವಿನಿ‌ ಸ್ವಾಗತಿಸಿ ಫಾತಿಮಾತ್ ರಾಫಿಯಾ ಧನ್ಯವಾದವಿತ್ತರು.  ತುಳಸಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم