ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ರಕ್ಷೆ ಕನ್ನಡ ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ

ಶ್ರೀ ರಕ್ಷೆ ಕನ್ನಡ ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ


ವಿಟ್ಲ: ಶ್ರೀರಕ್ಷೆ ಬಾಂಧವ್ಯದ ತೋಳಿನಲ್ಲಿ ಎಂಬ ಅಣ್ಣ ತಂಗಿಯ ಸಂಬಂಧವನ್ನು ಸಾರುವ ಕನ್ನಡ ಆಲ್ಬಮ್ ಸಾಂಗ್ ನ ಪೋಸ್ಟರ್ ವಿಟ್ಲ ಶ್ರಿ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ಕೃಷ್ಣಯ್ಯ ಕೆ ಅರಮನೆ ವಿಟ್ಲ ಇವರ ಮಾರ್ಗದರ್ಶನದಲ್ಲಿ ಬಿಡುಗಡೆಗೊಂಡಿತು.


ಕಾರ್ತಿಕ್ ಕುಮಾರ್ ಇವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಾಂಗ್ ಗೆ ಅಚಲ್ ವಿಟ್ಲ ಸಾಹಿತ್ಯ ಬರೆದಿದ್ದು ರಸಿಕ ಮುರುಳ್ಯ ರವರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಮಕ್ಕಳ ಪಾತ್ರದಲ್ಲಿ ಪ್ರಣೀತ್ ಜೋಗಿ ಮತ್ತು ದಿಶಾ ಕೆ ಎಸ್ ಅಭಿನಯಿಸಿದ್ದಾರೆ.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಯದು ವಿಟ್ಲ ಹಾಗೂ ಪ್ರಚಲಿತ ಯುಟ್ಯೂಬರ್ ಹಾಗೂ ಛಾಯಾಗ್ರಾಹಕ  ಬಾತು ಕುಲಾಲ್ ಪಾಲ್ಗೊಂಡಿದ್ದರು. ಶಿವಪ್ರಸದ್, ದೀಕ್ಷಿತ್ ವರ್ಮುಡಿ, ರಕ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post