ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆರ್ಲದಲ್ಲಿ ಸಹಕಾರ ಭಾರತಿಯಿಂದ ಚಿಂತನಾ ಬೈಠಕ್

ಪೆರ್ಲದಲ್ಲಿ ಸಹಕಾರ ಭಾರತಿಯಿಂದ ಚಿಂತನಾ ಬೈಠಕ್

ನಾನು ಎಂಬುದರ ಬದಲು ನಾವು ಎಂಬುದೇ ಸಹಕಾರಿ ಸಮಾಜಕ್ಕೆ ಪೂರಕ: ಕಜಂಪಾಡಿ ಸುಬ್ರಹ್ಮಣ್ಯ ಭಟ್



ಪೆರ್ಲ: ಸಹಕಾರಿ ಭಾರತಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಏಕ ದಿನ ಚಿಂತನಾ ಬೈಠಕ್ ಪೆರ್ಲದ ನಾಲಂದಾ ಮಹಾವಿದ್ಯಾಲಯದಲ್ಲಿ ಸೋಮವಾರ ಜರಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಖಿಲ ಭಾರತೀಯ ಕಾರ‍್ಯಕಾರಿಣಿ ಆಹ್ವಾನಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು “ಸಹಕಾರ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಲೀನವಾಗಿರುವ ಗುಣವಾಗಿದ್ದು ನಾನು ಎಂಬುದರ ಬದಲಾಗಿ ನಾವು ಎಂದು ಚಿಂತಿಸಿದಾಗ ಸಹಕಾರಿ ರಂಗವು ಸಮಾಜದ ಪ್ರಗತಿಗೆ ಪೂರಕವಾಗುತ್ತದೆ. ಭಿನ್ನತೆ ಹುಟ್ಟುವುದು ಸಹಜ ಆದರೆ ಭಿನ್ನಾಭಿಪ್ರಾಯವು ಅಂತಿಮ ತೀರ್ಮಾನದ ನಂತರ ಮುಂದುವರಿಯಬಾರದು.ಚರ್ಚೆಯ ನಂತರದ ತೀರ್ಮಾನವು ಅವಿರೋಧ ಎಲ್ಲರಿಗೂ ಸೀಕೃತವಾಗಬೇಕೆಂದು ಅವರು ಅಭಿಪ್ರಾಯಪಟ್ಟರು.


ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಗಣೇಶ ಪಾರೆಕಟ್ಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯ ಅಧ್ಯಕ್ಷ ಸುಧಾಕರನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್, ಅಖಿಲಭಾರತ ಸಹ ಸಂಪರ್ಕ ಪ್ರಮುಖ್ ಕೈಲಾಸ ಮೂರ್ತಿ, ಅಖಿಲ ಭಾರತ ಕಾರ‍್ಯಕಾರಿಣಿ ಸದಸ್ಯ ಅಡ್ವ.ಕರುಣಾಕರನ್ ನಂಬಿಯಾರ್, ಪ್ರಾಂತ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.


ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು,ಉಪಾಧ್ಯಕ್ಷರು, ಕ್ಯಾಂಪ್ಕೊ ನಿರ್ದೇಶಕರು, ಸರ್ಕಲ್ ಕೋ ಓಪರೇಟಿವ್ ಸದಸ್ಯರು ಹಾಗೂ ಹಿರಿಯ ಸಹಕಾರಿಗಳು ಬೈಠಕ್ ನಲ್ಲಿ ಪಾಲ್ಗೊಂಡರು. ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ಸ್ವಾಗತಿಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು ವಂದಿಸಿದರು.ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಆಶೋಕ್ ಬಾಡೂರು ನಿರೂಪಿಸಿದರು.

ಚಿತ್ರ: ಫೋಕಸ್ ಸ್ಟುಡಿಯೋ ಶೇಣಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post