ನೀರ್ಚಾಲು: ಇಂದು ಸಮಾಜದಲ್ಲಿನ ಅತೀ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಆರ್ಥಿಕ ಸಹಾಯ, ಆರೋಗ್ಯ ಸಹಾಯ, ವಸತಿ ನಿರ್ಮಾಣ, ಶುಚೀಕರಣ ಮೊದಲಾದ ಸೇವೆಗಳೊಂದಿಗೆ "ಜನರ ಸೇವೇಯೇ ಜನಾರ್ಧನ ಸೇವೆ" ಎಂಬ ಮಾತಿನಂತೆ ನೋವಿನಲ್ಲಿರುವವರಿಗೆ ಸಾಂತ್ವನ ಮಾಡುತ್ತಾ ಸೇವಾಭಾರತಿ ನೀರ್ಚಾಲು ತನ್ನ ಕೆಲಸ ಕಾರ್ಯಗಳನ್ನು ಸದ್ದಿಲ್ಲದೆ ಮುಂದುವರಿಸುತ್ತಾ ಇದೆ. ಇದರ ಮಹಾಸಭೆಯು ಇತ್ತೀಚೆಗೆ ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಸದಾಶಿವ ಮಾಸ್ಟರ್ ಅಧ್ಯಕ್ಷತೆಯಲ್ಲಿ ಜರಗಿತು.
ಬಾಲಕೃಷ್ಣ ಏಣಿಯರ್ಪು, ರಾಮಕೃಷ್ಣ ಹೆಬ್ಬಾರ್ ಮಾತನಾಡಿದರು. ಪ್ರದೀಪ್ ಮಾಸ್ಟರ್ ವಾರ್ಷಿಕ ವರದಿ ಮಂಡಿಸಿದರು, ಬಾಲಸುಬ್ರಹ್ಮಣ್ಯ ಭಟ್ ಆಯವ್ಯಯ ಮಂಡಿಸಿದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಸದಾಶಿವ ಮಾಸ್ಟರ್ ಬೇಳ, ಉಪಾಧ್ಯಕ್ಷರಾಗಿ ಬಾಲಗೋಪಾಲ ಏಣಿಯರ್ಪು, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಮಾಸ್ಟರ್ ಬೇಳ, ಕಾರ್ಯದರ್ಶಿಯಾಗಿ ರಮೇಶ ಕಳೇರಿ ಬೇಳ, ಕೋಶಾಧಿಕಾರಿಯಾಗಿ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮಕೃಷ್ಣ ಹೆಬ್ಬಾರ್, ಬಾಲಕೃಷ್ಣ ಮಲ್ಲಡ್ಕ, ಶಶಿಧರ ಏಣಿಯರ್ಪು, ಅಜಿತ್ ಕುಮಾರ್ ಏಣಿಯರ್ಪು, ಅಜಿತ್ ಬಿ ನೀರ್ಚಾಲು, ಸತೀಶ ಏಣಿಯರ್ಪು, ಶಿವರಾಮ ಮೊಳೆಯಾರು, ಮೋಹನ ಸಿ.ಎಚ್, ಬಾಲಕೃಷ್ಣ ಏಣಿಯರ್ಪು, ಪ್ರಕಾಶ್ ಕುಲಾಲ್, ಹರೀಶ ಎ.ಡಿ, ರಾಧಾಕೃಷ್ಣ ಏಣಿಯರ್ಪು, ನವೀನ ಏಣಿಯರ್ಪು, ಶಂಕರ ಡಿ, ಗಣೇಶ್ ಕೃಷ್ಣ ಅಳಕ್ಕೆ, ಮಧುಚಂದ್ರ ಮಾನ್ಯ, ಹರಿಪ್ರಿಯ ಚುಕ್ಕಿನಡ್ಕ, ಮಹೇಶ್ ವಳಕುಂಜ ಮೊದಲಾದವರನ್ನು ಆರಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق