ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದು ಪ್ರಶ್ನೆ

ಒಂದು ಪ್ರಶ್ನೆ


(ಸರಿ ಉತ್ತರ ಆಯ್ಕೆ ಮಾಡಿ)


ಮೊಟ್ಟೆ ಕಾರಿನ ಮೇಲೆ ಬಿದ್ದರೆ ಮೊಟ್ಟೆ ಒಡೆದು ಹೋಗುತ್ತೆ!! 

ಮೊಟ್ಟೆ ಮಂಡೆ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು?


೧) ಆಗಲೂ ಮೊಟ್ಟೆಯೇ ಒಡೆಯುತ್ತಿತ್ತು


೨) ಕಾದ ಮಂಡೆಗೆ ತಾಗಿ ಮೊಟ್ಟೆ ಮರಿಯಾಗುತ್ತಿತ್ತು.


೩) ಆಮ್ಲೇಟ್ ಆಗುತ್ತಿತ್ತು


೪) ಮಂಡೆ ಒಡೆಯುತ್ತಿತ್ತು


೫) ಪ್ರತಿಕ್ರಿಯೆಯಾಗಿ, ಉಳಿದ ಮೊಟ್ಟೆಗಳು ಒಡೆದು ಹೋಗುತ್ತಿದ್ದವು


೬) ರಾಜಕೀಯ ಧ್ರುವೀಕರಣ ಆಗುತ್ತಿತ್ತು


೭) ಸೇಬು ಹಣ್ಣು ಬಿದ್ದಾಗ ಆದಂತೆ ಮೊಟ್ಟೆಯನ್ನು ತಲೆ ಮೇಲೆ ಬೀಳಿಸಿಕೊಂಡವನಿಗೆ ಜ್ಞಾನೋದಯವಾಗುತ್ತಿತ್ತು.


೮) ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತಿದ್ದವು


೯) ಒಂದು ಮೊಟ್ಟೆಯ ಕತೆ ಚಿತ್ರದ ಭಾಗ ಎರಡು ತೆರೆಗೆ ಬರ್ತಾ ಇತ್ತು 


೧೦) ಮೊಟ್ಟೆ ಮೊದಲು, ಕಿರುಚುವ ಕೋಳಿ ಚಾನಲ್‌ಗಳು ನಂತರ ಅಂತ ಬಾಕಿ ಇದ್ದ ಕೋಳಿ-ಮೊಟ್ಟೆ ನ್ಯಾಯ ಬಗೆ ಹರಿಯುತ್ತಿತ್ತು!!  


ಬಹುಮಾನ: 

ಆಯ್ದ ಸರಿ ಒಂದು ಉತ್ತರಕ್ಕೆ ಕೊಡಗಿನ ಸಮಾರಂಭದಲ್ಲಿ ಒಂದು ಮೊಟ್ಟೆ ಕೊಡಲಾಗುವುದು!!! 

(ಹೈಸ್ಕೂಲ್‌ನಲ್ಲಿ ಗಣಿತ ಪರೀಕ್ಷೆಗೆ ಬಂದ ಮಾರ್ಕ್ಸ್ ನೆನಪು ಮಾಡಿಕೊಳ್ಳಿ)


-ಅರವಿಂದ ಸಿಗದಾಳ್, ಮೇಲುಕೊಪ್ಪ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم