ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೋಷಕರು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲಿಲ್ಲವೆಂದು ವಿದ್ಯಾರ್ಥಿ ಶೌಚಾಲಯ ದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಪೋಷಕರು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲಿಲ್ಲವೆಂದು ವಿದ್ಯಾರ್ಥಿ ಶೌಚಾಲಯ ದಲ್ಲಿ ನೇಣು ಬಿಗಿದು ಆತ್ಮಹತ್ಯೆ

 


ದಾವಣಗೆರೆ: ಪೋಷಕರು ವಸತಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗದ ಕಾರಣ ಮನನೊಂದ ವಿದ್ಯಾರ್ಥಿ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಿಲ್ಲೆಯ ಜಗಳೂರು ತಾಲೂಕಿನ ಮೆದಿಕೆರನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.

ಎಸ್.ಸುನೀಲ್ (12) ನೇಣಿಗೆ ಶರಣಾದ ವಿದ್ಯಾರ್ಥಿ.


ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಸಿ.ಬಿ ರಿಷ್ಯಂತ್

ಸಾಲಗಟ್ಟೆ ಗ್ರಾಮದ ಸುರೇಶ್ ಹಾಗೂ ಕವಿತಾ ದಂಪತಿಯ ಪುತ್ರ ಸುನೀಲ್, ಮೆದಿಕೆರನಹಳ್ಳಿಯ‌ ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಇಲ್ಲಿ ವ್ಯಾಸಂಗ ಮಾಡಲು ಇಷ್ಟವಿಲ್ಲದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುವುದು ಶಾಲೆ ಸಿಬ್ಬಂದಿ ಅಭಿಪ್ರಾಯ.


ಈ ಹಿಂದೆ ಸುನೀಲ್ ಮುಗ್ಗಿದರಾಗಿಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಇತ್ತೀಚೆಗೆ ಪೋಷಕರ ಮನವಿ ಮೇರೆಗೆ ಮ್ಯೂಚುವಲ್​ ಆಧಾರದ ಮೇಲೆ ಮೆಗಿನಕೆರೆ ವಸತಿ ಶಾಲೆಗೆ ದಾಖಲಾಗಿದ್ದ.

ಆತ್ಮಹತ್ಯೆಗೆ ಶರಣಾಗುವ ದಿನ ಪೋಷಕರಿಗೆ ಕರೆ ಮಾಡಿದ್ದ ಸುನೀಲ್ ಶಾಲೆಯಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದನಂತೆ. ಪೋಷಕರು ಬಾರದೇ ಇದ್ದದ್ದರಿಂದ ಮನನೊಂದು ಶಾಲೆಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.


ಈ ಬಗ್ಗೆ ಬಿಳಿಚೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಎಸ್​ಪಿ ಸಿ.ಬಿ ರಿಷ್ಯಂತ್ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


0 تعليقات

إرسال تعليق

Post a Comment (0)

أحدث أقدم