ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿದ್ರಾಮಯ್ಯನವರೇ, ಹೇಗೆ ಬೇಕಾದರೂ ದೇವಸ್ಥಾನಕ್ಕೆ ಹೋಗಬಲ್ಲೆ ಎನ್ನುವ ಉದ್ಧಟತನ ಬೇಡ

ಸಿದ್ರಾಮಯ್ಯನವರೇ, ಹೇಗೆ ಬೇಕಾದರೂ ದೇವಸ್ಥಾನಕ್ಕೆ ಹೋಗಬಲ್ಲೆ ಎನ್ನುವ ಉದ್ಧಟತನ ಬೇಡ


ಸಿದ್ರಾಮಯ್ಯನವರಿಗೆ ಭಾರತ ಸರಿಯಾಗಿ ಅರ್ಥವಾಗಿಯೆ ಇಲ್ಲ. ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶ ಕೊಡಬೇಕು ಎನ್ನುವ ಹೋರಾಟವಾಗಿದ್ದರೆ ನಮ್ಮೆಲ್ಲರ ಬೆಂಬಲ ಸಿದ್ದರಾಮಯ್ಯನವರ ಪರವಾಗಿ ಇರುತಿತ್ತು. ಆದರೆ ನಾನು ಹೇಗೆ ಬೇಕಾದರೂ ದೇವಸ್ಥಾನಕ್ಕೆ ಹೋಗಬಲ್ಲೆ ಎನ್ನುವ ಅಹಂಕಾರಕ್ಕೆ ಬೆಂಬಲ ಕೊಡಲು ಸಾದ್ಯವಿಲ್ಲ. ಏಕೆಂದರೆ ಇಲ್ಲಿ ಭಿನ್ನ ಭಿನ್ನ ದೇವಸ್ಥಾನಕ್ಕೂ ತನ್ನದೆ ಆದ ಕಟ್ಟು ಪಾಡುಗಳು, ನಿಯಮಗಳಿದ್ದಾವೆ. ಹಿಂದೂ ಸಮಾಜದಲ್ಲಿ ಮಾಂಸಹಾರಕ್ಕೆ ನಿಭಂದನೆ ಇಲ್ಲ ಹಾಗೆಯೆ ತಿನ್ನದೆ ಇರುವ ಭಕ್ತನ ಭಾವನೆಗಳಿಗೆ ಘಾಸಿಮಾಡುವ ಹಕ್ಕು ನಿಮಗೂ ಇಲ್ಲ ಸಿದ್ದರಾಮಯ್ಯನವ್ರೆ.


ಭಾರತದಲ್ಲಿ ಮಾಂಸಹಾರ ಮಾಡಿಯೂ ಹೋಗಬಹುದಾದ, ಪ್ರಾಣಿ ಬಲಿ ಕೊಡುವ ದೈವ ಸ್ಥಾನಗಳು, ದೇವಸ್ಥಾನಗಳು ಇದ್ದಾವೆ. ಮಾಂಸಹಾರ ಮಾಡಿ ಹೋಗಲೇಬಾರದ, ಈರುಳ್ಳಿ ಬೆಳ್ಳುಳ್ಳಿಯನ್ನು ಬಳಸದೆ ಸಾತ್ವಿಕ ಆಹಾರ ನೈವ್ಯೇದ್ಯ ಮಾಡುವ ದೇವಸ್ಥಾನಗಳಿದ್ದಾವೆ. ಮಾಂಸಹಾರ ಮಾಡದೆ ಇರುವಂತಹ ರಿಲಿಜಿಯನ್ ಗಳು ಭಾರತದಲ್ಲಿಯೆ ಹುಟ್ಟಿವೆ. ಅದರ ಹಿಂದೆ ಅಹಿಂಸೆಯಂತಹ ಮಹಾನ್ ತತ್ವವಿದೆ.


ಕೇವಲ ಕುಟುಂಬಗಳು ಪೂಜಿಸುವ ದೈವ/ದೇವಸ್ಥಾನಗಳಿದ್ದಾವೆ. ಕೇವಲ ಗ್ರಾಮಗಳು ಪೂಜಿಸುವ ದೇವಸ್ಥಾನಗಳಿದ್ದಾವೆ. ಕೆಲವು ಹಳ್ಳಿಗಳು ಸೇರಿ ಪೂಜೆ ಮಾಡುವ ದೇವಸ್ಥಾನಗಳಿವೆ. ಲಕ್ಷಾಂತರ ಜನ ಪೂಜಿಸುವ, ಕೋಟ್ಯಾಂತರ ಜನ ಸೇರುವ ದೇವಸ್ಥಾನಗಳು ಭಾರತದಲ್ಲಿ ಇವೆ.


ಹಾಗಾಗಿ ಉದ್ದಟತನ ಮೆರೆಯದೆ ದೇವಸ್ಥಾನದ ಭಕ್ತರ ಮನಸ್ಸಿಗೆ ಘಾಸಿ ಮಾಡದೆ ರಾಜಕಾರಣ ಮಾಡುವುದನ್ನು ಕಲಿಯಿರಿ ಸಿದ್ದರಾಮಯ್ಯನವ್ರೆ.

-ನಾಗಶೆಟ್ಟಿ ಅಂಗಡಿ ಖಾನಾಪುರ್‌


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم