ಮಂಗಳೂರು: ಕಳೆದ ಕೆಲವು ದಿನಗಳಿಂದ ಕಾಸರಗೋಡಿನ ಹಲವೆಡೆ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಹೂಡಿರುವುದು ಬೆಳಕಿಗೆ ಬಂದಿದೆ. ರೈಲು ಹಳಿಗಳಿಗೆ ಹಾನಿ ಎಸಗಿ ದುರಂತ ಸಂಭವಿಸುವಂತೆ ಮಾಡುವ ಸಂಚು ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಕಾಸರಗೋಡು ತಾಲೂಕಿನ ಮೂರ್ನಾಲ್ಕು ಕಡೆಗಳಲ್ಲಿ ಇಂತಹ ಕೃತ್ಯಗಳು ಬೆಳಕಿಗೆ ಬಂದಿದ್ದು, ಕೋಟಿಪುರಂ ರೈಲು ನಿಲ್ದಾಣದ ಸಮೀಪ ಕಬ್ಬಿಣ ಮತ್ತು ಕಾಂಕ್ರೀಟ್ ತುಂಡುಗಳನ್ನು ಹಳಿಯ ಮೇಲೆ ಇರಿಸಿರುವುದು ಪತ್ತೆಯಾಗಿದೆ.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಕೇರಳ ಪೊಲೀಸ್ ಇಲಾಖೆ ಮತ್ತು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಆ.21ರಂದು ಕಾಸರಗೋಡು- ಕಾಞಂಗಾಡು ಮಧ್ಯೆ ಹಾಗೂ ಕೋಟಿಕುಳಂ- ಬೇಕಲ ನಡುವೆ ರೈಲು ಹಳಿಗಳ ಮೇಲೆ ದುಷ್ಕೃತ್ಯ ನಡೆಸಲಾಗಿತ್ತು. ತೃಕ್ಕನ್ನಾಡು ದೇವಸ್ಥಾನದ ಬಳಿ ಹಳಿಗಳ ಮೇಲೆ ಕಬ್ಬಿಣದ ತೊಲೆಗಳನ್ನು ಇರಿಸಿದ್ದು ಬೆಳಕಿಗೆ ಬಂದಿತ್ತು. ರೈಲ್ವೇ ಗಾರ್ಡ್‌ನ ಸಮಯ ಪ್ರಜ್ಞೆಯಿಂದ ಈ ಎಲ್ಲ ದುರಂತಗಳು ಸಂಬವಿಸುವುದು ತಪ್ಪಿದೆ. ಕುಂಬಳೆ ರೈಲು ನಿಲ್ದಾಣದ ಸಮೀಪವೂ ಹಳಿಗಳ ಮೇಲೆ ಜಲ್ಲಿ ಕಲ್ಲುಗಳನ್ನು ಇರಿಸಿದ್ದು ಪತ್ತೆಯಾಗಿದೆ.
ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಮತ್ತೂರು- ಮಂಗಳೂರು ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق