ಬೆಂಗಳೂರು : ಹಲವಾರು ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದ ಹರೀಶ್ ರೈ ಗೆ ಸಂಕಷ್ಟ ಎದುರಾಗಿದೆ. ಹರೀಶ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕೆಜಿಎಫ್ ಸಿನಿಮಾ ಮುಗಿದ ಬಳಿಕ ಹರೀಶ್ ಅವರಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿದೆ. ಅವರು ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕ್ಯಾನ್ಸರ್ ಕೊನೆಯ ಹಂತ ತಲುಪಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಯುಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹರೀಶ್ ಹೇಳಿಕೊಂಡಿದ್ದಾರೆ.
ಇವರಿಗೆ ಚಿಕಿತ್ಸೆ ಕೊಡಿಸಲು ಕುಟುಂಬಸ್ಥರು ಕಷ್ಟಪಡುತ್ತಿದ್ದಾರೆ. ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ ಎನ್ನಲಾಗಿದೆ.
ಅವರಿಗೆ ಹಲವು ದಿನಗಳಿಂದ ಥೈರಾಯ್ಡ್ ಸಮಸ್ಯೆಯಿತ್ತು. ಆದರೆ ಅದು ಅವರ ಅರಿವಿಗೆ ಬಂದಿದ್ದೇ ತಡವಾಗಿ. ಕೆಜಿಎಫ್ ಸಿನಿಮಾ ಮಾಡುವ ಸಂದರ್ಭದಲ್ಲಿ ಅವರಿಗೆ ತೊಂದರೆ ಇದ್ದರೂ ಗೊತ್ತಾಗಿರಲಿಲ್ಲವಂತೆ.
ಸಮಸ್ಯೆ ಕಾಣಿಸಿಕೊಂಡಾಗ, ಕೆಜಿಎಫ್ ಸಿನಿಮಾ ಮಾಡಿದ ಬಳಿಕ ಚಿಕಿತ್ಸೆ ಪಡೆಯೋಣ ಎಂದು ಸುಮ್ಮನಾಗಿದ್ದರಂತೆ. ಕಾರಣ ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ಕೆಜಿಎಫ್ ಸಿನಿಮಾದಿಂದ ಬರುವ ಹಣವನ್ನು ಮನೆಗೆ ಬಳಸಿ ಬಳಿಕ ಚಿಕಿತ್ಸೆಗೆ ಹೋಗೋಣ ಎಂದು ಸುಮ್ಮನಿದ್ದರಂತೆ. ಆದರೀಗ ಕ್ಯಾನ್ಸರ್ ಕೊನೆಯ ಹಂತ ತಲುಪಿದೆ.
ಹರೀಶ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಗೊತ್ತಾದರೆ ಯಾರು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಇಷ್ಟು ದಿನ ವಿಷಯವನ್ನು ಮುಚ್ಚಿಟ್ಟಿದರಂತೆ. ಇದೀಗ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
إرسال تعليق